Saturday, April 27, 2024
spot_imgspot_img
spot_imgspot_img

3 ತಲೆಯಿರುವ ವಿಶೇಷ ಕರು ಜನನ

- Advertisement -G L Acharya panikkar
- Advertisement -

ನಂಜನಗೂಡು: ತಾಲ್ಲೂಕಿನ ದಾಸನೂರು ಗ್ರಾಮದ ಮನೆಯೊಂದರಲ್ಲಿ ಮೂರು ತಲೆಯಿರುವ ಕರುವೊಂದು ಜನಿಸಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.

ಗ್ರಾಮದ ರೈತ ಆನಂದ್ ಅವರ ಮನೆಯಲ್ಲಿ ಹಸುವೊಂದು ವಿಶೇಷ ಕರುವಿಗೆ ಜನ್ಮ ನೀಡಿದೆ. ಆದರೆ, ಮೂರು ತಲೆ ಹೊಂದಿರುವ ಈ ಕರು ಹುಟ್ಟಿದ ಕೆಲ ಹೊತ್ತಿನಲ್ಲೇ ಪ್ರಾಣ ಕಳೆದುಕೊಂಡಿದೆ.

ಈ ರೀತಿಯ ಕರು ಜನನವಾಗಿರುವುದನ್ನು ಕಂಡು ಆಶ್ಚರ್ಯಪಟ್ಟ ಮನೆಯವರು ಪಶುವೈದ್ಯರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಮನೆಗೆ ಆಗಮಿಸಲಿದ್ದು, ಕರುವನ್ನು ಪರೀಕ್ಷೆಗೊಳಪಡಿಸಲಿದ್ದು, ಬಳಿಕ ಕರುವನ್ನು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಿದ್ದೇವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ʻಹಸು ಆರೋಗ್ಯವಾಗಿದೆ‌. ನಾಟಿ ಹಸುವಿಗೆ ಹೈಬ್ರೀಡ್ ಕೃತಕ ಗರ್ಭಧಾರಣೆಗೆ ಇಂಜೆಕ್ಷನ್ ನೀಡಿದ ಸಂದರ್ಭದಲ್ಲಿ ಈ ರೀತಿ ವ್ಯತ್ಯಾಸಗಳಾಗುತ್ತವೆʼ ಎಂದು ಪಶು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ‌.

- Advertisement -

Related news

error: Content is protected !!