Thursday, October 22, 2026
spot_imgspot_img
spot_imgspot_img

ಬೋಳಿಯಾರ್: ಪಿಕಪ್ ಢಿಕ್ಕಿಪಡಿಸಿಇಬ್ಬರು ಯುವಕರ ಕೊಲೆ ಪ್ರಕರಣ: ಆರೋಪಿಗೆ ನ್ಯಾಯಾಂಗ

- Advertisement -
- Advertisement -

ಬಂಧನಕೊಣಾಜೆ: ಬೋಳಿಯಾ‌lರ್ ಸಮೀಪದ ಕುರ್ನಾಡು ಪಡೀಲ್‌ ಪೆಟ್ರೋಲ್‌ ಪಂಪ್ ಬಳಿ ಅ.19ರಂದು ಸ್ಕೂಟರ್‌ಗೆ ಹಿಂಬದಿಯಿಂದ ಪಿಕಪ್ ಢಿಕ್ಕಿಪಡಿಸಿ ಇಬ್ಬರು ಯುವಕರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಾಲಕ ಬೋಳಿಯಾ‌ರ್ ಗ್ರಾಮದ ಹಫೀಝ್ ಯಾನೆ ಅಪ್ಪಿ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನವಾಗಿದೆ.ಕಿನ್ಯ ಅರಬಿ ನಗರದ ಮುಹಮ್ಮದ್ ಅರ್ಫಾಝ್ ಮತ್ತು ಕಿನ್ಯ ಉಕ್ಕುಡದ ಮುಹಮ್ಮದ್ ಜುನೈದ್ ತೆರಳುತ್ತಿದ್ದ ಸ್ಕೂಟರ್‌ಗೆ ಪಿಕಪ್ ವಾಹನ ಢಿಕ್ಕಿ ಪಡಿಸಿ ಕೊಲೆ ಮಾಡಲಾಗಿತ್ತು.ಈ ಕೃತ್ಯದಲ್ಲಿ ಅರ್ಫಾಝ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಜುನೈದ್‌ನನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುನೈದ್ ಮೃತಪಟ್ಟಿದ್ದಾರೆ. ಆರಂಭದಲ್ಲಿ ಇದೊಂದು ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ತನಿಖೆಯ ವೇಳೆ ಇದೊಂದು ಕೊಲೆ ಎಂದು ತಿಳಿದ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

- Advertisement -

Related news

error: Content is protected !!