Thursday, September 12, 2024
spot_imgspot_img
spot_imgspot_img

340 ಕೆ.ಜಿ. ತೂಕದ ಬೃಹತ್ ಅಂಬೂರ್‌ ಮೀನು; ಖರೀದಿಗೆ ಮುಗಿಬಿದ್ದ ಮತ್ಸ್ಯಪ್ರಿಯರು

- Advertisement -G L Acharya panikkar
- Advertisement -

ಮಂಗಳೂರಿನಿಂದ ಚಿಕ್ಕಮಗಳೂರಿಗೆ 340 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ಬಂದಿದ್ದು, ಮತ್ಸ್ಯ ಜಾತಿಯಲ್ಲೇ ಅಪರೂಪದ ತಳಿ ಅಂಬೂರು ಸಮುದ್ರ ಮೀನಿಗಾಗಿ ನಗರದಲ್ಲಿ ಮೀನುಪ್ರಿಯರು ಮುಗಿಬಿದ್ದಿದ್ದಾರೆ. ಈ 340 ಕೆ.ಜಿ. ತೂಕದ ಭಾರೀ ಗಾತ್ರದ ಮೀನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದು, ಇನ್ನು 1 ಕೆ.ಜಿ. ಮೀನಿಗೆ 1000 ಕೊಡುತ್ತೇವೆ ಅಂದರೂ ಅಂಬೂರು ಮೀನು ಸಿಗುವುದಿಲ್ಲ.

ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿರುವ ಖಾಸಗಿ ಮೀನಿನ ಅಂಗಡಿ ಈ ಅಂಬೂರ್‌ ಮೀನು ಬಂದಿದ್ದು, ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.

ಪ್ರತಿ ಕೆಜಿಗೆ 600 ರೂ. ನಿಗದಿ ಮಾಡಿದ್ದ ಅಂಗಡಿ ಮಾಲೀಕ ಗ್ರಾಹಕರ ಬೇಡಿಕೆ ಹೆಚ್ಚಿದಂತೆ 1,000 ರೂ. ನಿಗದಿ ಮಾಡಿದ್ದಾನೆ. ಆದರೂ ಗ್ರಾಹಕರು ನಿರುತ್ಸಾಹಗೊಳ್ಳದೇ ಮುಗಿಬಿದ್ದು ಖರೀದಿಸಿದ್ದಾರೆ. ಗ್ರಾಹಕರನ್ನ ಸಂಭಾಳಿಸಲು ಅಂಗಡಿ ಮಾಲೀಕ ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಈ ಮೀನು ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಿಗೆ ಭಾರತದಿಂದ ರಫ್ತಾಗುತ್ತದೆ. ಮೊದಲ ಬಾರಿಗೆ ಚಿಕ್ಕಮಗಳೂರಿನ ಗ್ರಾಹಕರ ಬೇಡಿಕೆಗೆ ಮಣಿದು ಅಂಗಡಿ ಮಾಲೀಕ ತರಿಸಿ ಮಾರಾಟ ಮಾಡಿದ್ದಾನೆ. ಗ್ರಾಹಕರ ಉತ್ಸಾಹ ಹಾಗೂ ಮೀನಿಗೆ ಇರುವ ಬೇಡಿಕೆ ಕಂಡು ಅಂಗಡಿ ಮಾಲೀಕ ಫುಲ್ ಖುಷ್‌ ಆಗಿದ್ದಾನೆ.

- Advertisement -

Related news

error: Content is protected !!