Wednesday, October 14, 2026
spot_imgspot_img
spot_imgspot_img

ಮಂಗಳೂರು ದಸರಾ: ಅ.15ರಂದು ಕುದ್ರೋಳಿ ಸುತ್ತಮುತ್ತ ಸಂಚಾರ ಬದಲಾವಣೆ, ಸಾರ್ವಜನಿಕರಿಗೆ ಪೊಲೀಸ್ ಸೂಚನೆ

- Advertisement -
- Advertisement -

ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ರಾಜ್ಯದ ಮುಖ್ಯಮಂತ್ರಿ ಅ.15ರಂದು ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಸಂಚಾರ ಸಲಹೆ ಪ್ರಕಟಿಸಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.

ಅಂದು ಸಂಜೆ 4 ಗಂಟೆಯಿಂದ ಕೆ.ಪಿ.ಟಿ. ವೃತ್ತದಿಂದ ಕೆ.ಎಸ್.ಆರ್.ಟಿ.ಸಿ., ಲಾಲ್‌ಬಾಗ್ ಮೂಲಕ ನಾರಾಯಣಗುರು ವೃತ್ತದವರೆಗೆ ಹಾಗೂ ನಾರಾಯಣಗುರು ವೃತ್ತದಿಂದ ಮಣ್ಣಗುಡ್ಡೆ, ದುರ್ಗಾಮಹಲ್ ಜಂಕ್ಷನ್, ಕುದ್ರೋಳಿ ದೇವಸ್ಥಾನ, ಅಳಕೆ ಸೇತುವೆ ಮತ್ತು ನ್ಯೂ ಚಿತ್ರಾ ಜಂಕ್ಷನ್ ಕಡೆಗೆ ಸಾಗುವ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.ಸಂಜೆ 4ರಿಂದ ರಾತ್ರಿ 8 ಗಂಟೆಯವರೆಗೆ ನ್ಯೂ ಚಿತ್ರಾ ಜಂಕ್ಷನ್‌ನಿಂದ ದುರ್ಗಾಮಹಲ್ ಜಂಕ್ಷನ್‌ವರೆಗೆ ಹಾಗೂ ದುರ್ಗಾಮಹಲ್ ಜಂಕ್ಷನ್‌ನಿಂದ ನ್ಯೂ ಚಿತ್ರಾ ಜಂಕ್ಷನ್‌ವರೆಗೆ ವಾಹನ ಸಂಚಾರ ಮಾಡದೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.

- Advertisement -

Related news

error: Content is protected !!