Monday, November 23, 2026
spot_imgspot_img
spot_imgspot_img

ಇಂದಿನಿಂದ ವಿಟ್ಲದ ಪ್ರಸಿದ್ಧ M/s ಪಿ. ಜನಾರ್ಧನ ಪೈ ವ್ಯಾಪಾರ ಮಳಿಗೆ ತಾತ್ಕಾಲಿಕವಾಗಿ ಶ್ರೀ ಕೃಷ್ಣ ರೈಸ್ ಮಿಲ್ ಆವರಣಕ್ಕೆ ಸ್ಥಳಾಂತರ-ಗ್ರಾಹಕರು ಎಂದಿನಂತೆ ಸಹಕರಿಸುವಂತೆ ಪ್ರಕಟಣೆ

- Advertisement -
- Advertisement -

*

ವಿಟ್ಲ: ವ್ಯಾಪಾರ ಕ್ಷೇತ್ರದಲ್ಲಿ ನೂರಾರು ವರ್ಷಗಳಿಂದ ತನ್ನದೇ ಹೆಸರಿನೊಂದಿಗೆ ಗ್ರಾಹಕರ ಮನಗೆದ್ದಿರುವ ವಿಟ್ಲದ ಪ್ರಸಿದ್ಧ ವ್ಯಾಪಾರ ಮಳಿಗೆ M/s ಪಿ. ಜನಾರ್ಧನ ಪೈ (ಜನ್ ಪೈ) ವ್ಯಾಪಾರ ಮಳಿಗೆಯ ನವೀಕರಣ ಕಾಮಗಾರಿ ನಡೆಯಲಿರುವ ಹಿನ್ನಲೆ, ವ್ಯಾಪಾರವನ್ನು ಇಂದಿನಿಂದ ತಾತ್ಕಾಲಿಕವಾಗಿ ಶ್ರೀ ಕೃಷ್ಣ ರೈಸ್ ಮಿಲ್ ಆವರಣ ವಿಟ್ಲ ಇಲ್ಲಿಗೆ ಸ್ಥಾಳಾಂತರಿಸುವುದಾಗಿ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಥಳ ಬದಲಾವಣೆಯಾದರೂ ಗ್ರಾಹಕರಿಗೆ ಎಲ್ಲಾ ರೀತಿಯ ಸೇವೆಗಳು, ಗುಣಮಟ್ಟ ಮತ್ತು ಗ್ರಾಹಕರ ಮೇಲಿನ ಕಾಳಜಿಯಲ್ಲಿ ಬದಲಾವಣೆ ಇರುವುದಿಲ್ಲ.

ಸಾರ್ವಜನಿಕರೆಲ್ಲರೂ ಎಂದಿನಂತೆ ಸಹಕರಿಸುವಂತೆ ಈ ಮೂಲಕ ತಿಳಿಸಿದ್ದಾರೆ. ಮತ್ತೆ ಭವ್ಯವಾದ ಕಟ್ಟಡದೊಂದಿಗೆ ಆಧುನಿಕ ಶೈಲಿಯ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡ ಹೊಸ ಮಾದರಿಯ ವ್ಯಾಪಾರ ಮಳಿಗೆ ಅತೀ ಶೀಘ್ರದಲ್ಲಿ ವಿಟ್ಲದಲ್ಲಿ ತಲೆಎತ್ತಿ ನಿಲ್ಲಲಿದೆ.

ಅಲ್ಲಿಯ ವರೆಗೆ ಎಲ್ಲಾ ಗ್ರಾಹಕರು ಎಂದಿನಂತೆ ಸಹಕರಿಸುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, 9448472207, 9448455717

- Advertisement -

Related news

error: Content is protected !!