Tuesday, July 1, 2025
spot_imgspot_img
spot_imgspot_img

ನಾಳೆಯಿಂದ 4 ದಿನ ಬ್ಯಾಂಕ್ ಬಂದ್!

- Advertisement -
- Advertisement -

ನವದೆಹಲಿ: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್, ಮಾರ್ಚ್​ 15 ಮತ್ತು 16ರಂದು ಭಾರತದಾದ್ಯಂತ ಬ್ಯಾಂಕ್​ ಬಂದ್​ ಮಾಡುವಂತೆ ಕರೆ ನೀಡಿದೆ.

ಕೇಂದ್ರ ಸರ್ಕಾರ ಈಗಾಗಲೇ ಹಲವು ಬ್ಯಾಂಕ್​ಗಳನ್ನ ಖಾಸಗೀಕರಣ ಮಾಡಿದೆ, ಇನ್ನು ಹಲವು ಬ್ಯಾಂಕ್​ಗಳನ್ನ ಖಾಸಗೀಕರಣ ಮಾಡುವುದಾಗಿ ತಿಳಿಸಿದೆ. ಈ ವಿಚಾರವಾಗಿ ಆಕ್ರೋಶಗೊಂಡಿರುವ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್,​ ಬ್ಯಾಂಕ್ ಬಂದ್​ ಮಾಡುವಂತೆ ಕರೆ ಕೊಟ್ಟಿದೆ.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಕೆಳಗೆ ಅಖಿಲ ಭಾರತ ಬ್ಯಾಂಕ್​ ಸಿಬ್ಬಂದಿಗಳ ಸಂಘ, ಭಾರತೀಯ ಬ್ಯಾಂಕ್​ ಮುಖ್ಯಸ್ಥರ ಸಂಘ ಸೇರಿದಂತೆ ಇತರೆ 7 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಸಿಬ್ಬಂದಿ ಬಂದ್​ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದೆ.

ಹೀಗಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ ವ್ಯವಹಾರಗಳು ನಡೆಯುವುದು ಅನುಮಾನ ಎನ್ನಲಾಗಿದೆ. ನಾಳೆ ಎರಡನೇ ಶನಿವಾರ ಹಿನ್ನೆಲೆ ರಜೆ, ಭಾನುವಾರ ಎಂದಿನಂತೆ ರಜೆ ಇರಲಿದೆ.

15 ಮತ್ತು 16 ರಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಬಂದ್​ಗೆ ಕರೆಕೊಟ್ಟ ಹಿನ್ನೆಲೆ ಆ ಎರಡೂ ದಿನಗಳ ಕಾಲ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುವುದು ಬಹುತೇಕ ಅನುಮಾನವಾಗಿದೆ.

- Advertisement -

Related news

error: Content is protected !!