Saturday, June 6, 2026
spot_imgspot_img
spot_imgspot_img

ಸುಮಾರು 4 ಗಂಟೆಗಳ ವಿಚಾರಣೆ ಬಳಿಕ ಮನೆಗೆ ತೆರಳಿದ ಐಂದ್ರಿತಾ ರೇ ಮತ್ತು ದಿಗಂತ್

- Advertisement -
- Advertisement -

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಐಂದ್ರಿತಾ ರೇ ಮತ್ತು ದಿಗಂತ್ ವಿಚಾರಣೆ ಮುಗಿಸಿ ಮನೆಗೆ ಮರಳಿದ್ದಾರೆ. ಸುಮಾರು 4 ಗಂಟೆಗಳ ವಿಚಾರಣೆ ಬಳಿಕ ಇಬ್ಬರಿಗೂ ಸಿಸಿಬಿ ಮುಂದಿನ ವಿಚಾರಣೆಗೆ ಕರೆದಾಗ ಬರುವಂತೆ ಸೂಚಿಸಿ ಕಳುಹಿಸಿದೆ.

ವಿಚಾರಣೆ ಬಳಿಕ ಕಾಲ್ ಡಿಟೇಲ್ಸ್ ಸೇರಿದಂತೆ ತನಿಖೆಗೆ ಅಗತ್ಯ ಮಾಹಿತಿ ಪಡೆಯುವ ಉದ್ದೇಶದಿಂದ ಐಂದ್ರಿತಾ ಮತ್ತು ದಿಗಂತ್ ಮೊಬೈಲ್ ಸೀಜ್ ಮಾಡಲಾಗಿದೆ. ದಿಗಂತ್ ಮತ್ತು ಐಂದ್ರಿತಾಗೆ ಸೇರಿದ ಒಟ್ಟು 4 ಮೊಬೈಲ್ ಗಳನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.

ಮೂಲಗಳ ಮಾಹಿತಿ ಪ್ರಕಾರ ಸಿಸಿಬಿಗೆ ಐಂದ್ರಿತಾ ಮತ್ತು ದಿಗಂತ ಮೊಬೈಲ್ ನಲ್ಲಿ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದೆ ಎನ್ನಲಾಗಿದೆ , ಅಲ್ಲದೇ ಇಬ್ಬರು ಫ್ಯಾನ್ಸಿ ನಂಬರ್ ಹೊಂದಿದ್ದು ಪಾರ್ಟಿ ಹಾಗೂ ಡ್ರಗ್ಸ್ ವಿಚಾರದ ಮಾತುಕತೆಗೆ ಈ ನಂಬರ್ ಗಳನ್ನು ಬಳಸುತ್ತಿದ್ದರಂತೆ.
ದಿಗಂತ್ ಮತ್ತು ಐಂದ್ರಿತಾ ವಿಚಾರಣೆ ಬಗ್ಗೆ ಮಾಹಿತಿ ನೀಡಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಐಂದ್ರಿತಾ ಮತ್ತು ದಿಗಂತ್ ಗೆ ನೊಟೀಸ್ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದಾರೆ. ಹಲವು ಮಹತ್ವದ ಮಾಹಿತಿ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಅಗತ್ಯವಿದ್ದರೇ ಮತ್ತೊಮ್ಮೆ ನೊಟೀಸ್ ನೀಡಿ ವಿಚಾರಣೆಗೆ ಕರೆಯುತ್ತೇವೆ ಎಂದರು.

- Advertisement -

Related news

error: Content is protected !!