Thursday, April 18, 2024
spot_imgspot_img
spot_imgspot_img

ಚಿಕ್ಕಮಗಳೂರು: ಆಸಿಡ್ ಎರಚಿದ ಪ್ರಕರಣ; ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಲಕ್ಷ ದಂಡ

- Advertisement -G L Acharya panikkar
- Advertisement -

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಮಹಿಳೆಯ ಮೇಲೆ ಆಸಿಡ್ ಎರಚಿದ ಪ್ರಕರಣಕ್ಕೆ ಸಂಬ0ಧಿಸಿದ0ತೆ ನಾಲ್ವರು ಆರೋಪಿಗಳಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಅಲ್ಲದೇ, ತಲಾ 5 ಲಕ್ಷದಂತೆ 20 ಲಕ್ಷ ದಂಡವನ್ನು ವಿಧಿಸಿದೆ.

ಶೃಂಗೇರಿಯಲ್ಲಿ ಮಹಿಳೆ ಮೇಲೆ ಆಸಿಡ್ ಎರಚಿದ ಪ್ರಕರಣಕ್ಕೆ ಸಂಬ0ಧಿಸಿದ0ತೆ ಇಂದು ಚಿಕ್ಕಮಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದಂತ ಮಂಜುನಾಥ ಸಂಗ್ರೆಸಿ ಅವರು, ಆರೋಪಿಗಳಾದಂತ ಗಣೇಶ್, ಮಹಮ್ಮದ್ ಕಬೀರ್, ವಿನೋದ್ ಹಾಗೂ ಅಬ್ದುಲ್ ಮಜೀದ್ ಗಳಿಗೆ ಜೀವಾವಧಿ ಶಿಕ್ಷೆಯಲ್ಲದೇ, ತಲಾ 5 ಲಕ್ಷದಂತೆ 20 ಲಕ್ಷ ದಂಡವನ್ನು ವಿಧಿಸಿ, ಆದೇಶವನ್ನು ಪ್ರಕಟಿಸಿದ್ದಾರೆ.

ಅಂದಹಾಗೇ, 2015 ಏಪ್ರಿಲ್ 18 ರಂದು ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕಾರ್ಯನಿರ್ವಹಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೆಣಸೆಯ ಮನೆಯ ಬಳಿ ಈ ಆರೋಪಿಗಳು ಕೃತ್ಯ ನಡೆಸಿದ್ದರು. ಮುಖ್ಯ ಆರೋಪಿ ಗಣೇಶ್ ಶೃಂಗೇರಿಯಲ್ಲಿ ನೆಲೆಸಿದ್ದು ಮದುವೆಯಾಗುವಂತೆ ಆಕೆಯನ್ನು ಪೀಡಿಸುತ್ತಿದ್ದ ಆದರೆ ಆಕೆ ನಿರಾಕರಿಸಿದ್ದಳು. ಈ ವೇಳೆ ಸಂತ್ರಸ್ತೆಯ ಮೇಲೆ ಆಸಿಡ್ ದಾಳಿ ನಡೆಸಲಾಗಿತ್ತು. ಇದರಿಂದಾಗಿ ಆಕೆಯ ಎಡಗಣ್ಣಿಗೆ ಹಾನಿಯಾಗಿತ್ತು. ಅಲ್ಲದೇ ಮೈಕೈ ಸುಟ್ಟಿತ್ತು.

ಈ ಸಂಬ0ಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಫೋನ್ ಕರೆ ವಿವರ ಆಧರಿಸಿ ಅಂದಿನ ವೃತ್ತ ನಿರೀಕ್ಷಕ ಸುಧೀರ್ ಹೆಗ್ಡೆ ಮತ್ತವರ ಸಿಬ್ಬಂದಿ ಪ್ರಕರಣ ಭೇದಿಸಿದ್ದರು. ಸರ್ಕಾರದ ಪರವಾಗಿ ಬಿ .ಎಸ್. ಮಮತಾ ವಾದ ಮಂಡಿಸಿದ್ದರು.

driving
- Advertisement -

Related news

error: Content is protected !!