Saturday, June 27, 2026
spot_imgspot_img
spot_imgspot_img

ಶ್ರೀ ರಾಮ್ ಫೈನಾನ್ಸ್‌ ಸಿಎಸ್‌ಆರ್ ಹಾಗೂ ಪಂಚಾಯತ್ ಅನುದಾನದಲ್ಲಿ ಮೈರ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ

- Advertisement -
- Advertisement -

ಪುತ್ತೂರು: ಪುತ್ತೂರಿನ ಕೇಪು ಗ್ರಾಮದ ಮೈರ ಅಂಗನವಾಡಿ ಕೇಂದ್ರಕ್ಕೆ ಶ್ರೀ ರಾಮ್ ಫೈನಾನ್ಸ್‌ನ ಸಿಎಸ್‌ಆರ್ (CSR) ಯೋಜನೆ ಹಾಗೂ ಗ್ರಾಮ ಪಂಚಾಯತ್‌ನ ಅನುದಾನದಡಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆರೈಕೆ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ಅತ್ಯಂತ ಮಹತ್ವದ್ದಾಗಿದೆ. ಸರ್ಕಾರಿ ಇಲಾಖೆ, ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಗಳ ಸಹಭಾಗಿತ್ವದಿಂದ ಇಂತಹ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗುತ್ತಿವೆ ಎಂದು ಹೇಳಿದರು.ನೂತನ ಅಂಗನವಾಡಿ ಕಟ್ಟಡ ನಿರ್ಮಾಣದಿಂದ ಸ್ಥಳೀಯ ಮಕ್ಕಳಿಗೆ ಸುರಕ್ಷಿತ ಹಾಗೂ ಉತ್ತಮ ಕಲಿಕಾ ವಾತಾವರಣ ದೊರೆಯಲಿದ್ದು, ಅಂಗನವಾಡಿ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಲು ನೆರವಾಗಲಿದೆ.

ಕಾರ್ಯಕ್ರಮದಲ್ಲಿ ಶ್ರೀ ರಾಮ್ ಫೈನಾನ್ಸ್‌ನ ವಲಯ ವ್ಯವಹಾರ ಪ್ರಮುಖ ಶರತ್‌ಚಂದ್ರ ಭಟ್ ಕಾಕುಂಜೆ, ದಯಾನಂದ ಉಜಿರೆಮಾರ್, ರಾಧಾಕೃಷ್ಣ ಆಳ್ವಾ ಸಾಜ, ಹರಿಪ್ರಸಾದ್ ಯಾದವ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಘವ ಮಣಿಯಾಣಿ, ಪಂಚಾಯತ್ ಉಪಾಧ್ಯಕ್ಷರು ಹಾಗೂ ಸದಸ್ಯರು, ಪುರುಷೋತ್ತಮ ಮೈರ, ರಾಜೇಶ್ ಬಡಗನ್ನೂರು, ಸಿಡಿಪಿಒ ಕಚೇರಿಯ ಶಾರದಾ, ಅಡ್ಯನಡ್ಕ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜನಾರ್ದನ ಭಟ್, ಅಂಗನವಾಡಿ ಸಿಬ್ಬಂದಿ, ಶ್ರೀ ರಾಮ್ ಫೈನಾನ್ಸ್‌ನ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

Related news

error: Content is protected !!