- Advertisement -
- Advertisement -

ಶ್ರೀನಗರ: ಜಮ್ಮುವಿನ ಸೇನಾ ಶಿಬಿರವೊಂದರಲ್ಲಿ ರವಿವಾರ 45 ವರ್ಷದ ಯೋಧರೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ನಿವಾಸಿಯಾದ ನಾಯಕ್ ವಾಫ್ ಅಂಬಾಡೆಸ್ ಅವರು ಮೃತದೇಹ ಇಲ್ಲಿ ಚನ್ನಿ ಹಿಮ್ಮತ್ ಪ್ರದೇಶದಲ್ಲಿರುವ ಸಂಜ್ವಾನ್ ಸೇನಾ ಶಿಬಿರದ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಾವಿಗೆ ಕಾರಣವೇನು ಎಂಬುದು ತತ್ಕಣಕ್ಕೆ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- Advertisement -








