Saturday, September 26, 2026
spot_imgspot_img
spot_imgspot_img

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಅರ್ಜಿ ವಜಾ; ಸೋಮವಾರ ಮಾಫಿ ಸಾಕ್ಷಿ ಪ್ರದೂಶ್ ರಾವ್ ಹೇಳಿಕೆ ದಾಖಲು

- Advertisement -
- Advertisement -

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸೋಮವಾರ 14ನೇ ಆರೋಪಿಯಾಗಿದ್ದ ಈಗ ಮಾಫಿ ಸಾಕ್ಷಿ ಆಗಿರುವ ಪ್ರದೂಶ್ ರಾವ್ ಹೇಳಿಕೆ ದಾಖಲು ಮಾಡುವುದು ಖಚಿತವಾಗಿದೆ. ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕು, ಹೀಗಾಗಿ ಸೋಮವಾರ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಬಾರದು ಎಂಬ ದರ್ಶನ್ ಪರ ಅರ್ಜಿಯನ್ನು ಇಂದು(ಸೆ.26) 59 ಸಿಸಿಹೆಚ್ ನ್ಯಾಯಾಲಯ ವಜಾ ಮಾಡಿ ಅದೇಶ ಮಾಡಿದೆ.

ಈ ಹಿಂದೆ ಪ್ರದೂಶ್ ರಾವ್ ಮಾಫಿ ಸಾಕ್ಷಿಯಾಗಲು ಅವಕಾಶ ನೀಡಿ ವಿಚಾರಣಾ ನ್ಯಾಯಾಲಯ ಅದೇಶ ಮಾಡಿತ್ತು. ಇದನ್ನು ಪ್ರಶ್ನೆ ಮಾಡಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇದರ ವಿಚಾರಣೆಯನ್ನು ನಡೆಸಿದ್ದ ಹೈಕೋರ್ಟ್ ಮಾಫಿ ಸಾಕ್ಷಿಯನ್ನು ತಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲವೆಂದು ವಿಜಯಲಕ್ಷ್ಮಿ ಅವರ ಅರ್ಜಿಯನ್ನ ವಜಾ ಮಾಡಿತ್ತು.ಹೀಗಾಗಿ ವಿಚಾರಣಾ ನ್ಯಾಯಾಲಯ ಸೆಪ್ಟೆಂಬರ್ 28ಕ್ಕೆ ಮಾಫಿ ಸಾಕ್ಷಿ ಪ್ರದೂಶ್ ರಾವ್ ಗೆ ಸಾಕ್ಷಿ ನುಡಿಯಲು ಸಮನ್ಸ್ ಜಾರಿ ಮಾಡಿತ್ತು.

ಇದನ್ನ ಪ್ರಶ್ನೆ ಮಾಡಿ ಸುಪ್ರಿಂ ಕೋರ್ಟ್ ಗೆ ಹೋಗಲಾಗುವುದು, ಹೀಗಾಗಿ ಮಾಫಿ ಸಾಕ್ಷಿ ಹೇಳಿಕೆ ದಾಖಲು ಒಂದು ವಾರ ಮುಂದೂಡಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ ಈಗ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದ್ದು, ಸೋಮವಾರ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗಲಿದೆ.

- Advertisement -

Related news

error: Content is protected !!