ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾನಿಲಯವು (DU) ಪರಿಷ್ಕರಿಸಿರುವ ಸ್ನಾತಕೋತ್ತರ ಇತಿಹಾಸ ಪಠ್ಯಕ್ರಮದ ಸೆಮಿಸ್ಟರ್ IIIರಿಂದ ದಿಲ್ಲಿ ಸುಲ್ತಾನರ ಕುರಿತ ಪಠ್ಯವನ್ನು ಕೈಬಿಟ್ಟಿದೆ ಎಂದು NDTV ವರದಿ ಮಾಡಿದೆ.
‘ದಿಲ್ಲಿ ಸುಲ್ತಾನರ: ಮಧ್ಯಕಾಲೀನ ಉತ್ತರ ಭಾರತದಲ್ಲಿ ಅಧಿಕಾರದ ರಚನೆಗಳು (13-14ನೇ ಶತಮಾನಗಳು)’ ಎಂಬ ಪಠ್ಯವನ್ನು ಈ ಹಿಂದೆ ಸೆಮಿಸ್ಟರ್ ॥ರಲ್ಲಿ ಬೋಧಿಸಲಾಗುತ್ತಿತ್ತು. ಮಧ್ಯಕಾಲೀನ ರಾಜ್ಯದ ರಚನೆ, ರಾಜಕೀಯ ಅಧಿಕಾರದ ಸ್ವರೂಪ ಮತ್ತು ಮಧ್ಯಕಾಲೀನ ಉತ್ತರ ಭಾರತದಲ್ಲಿ ಅಧಿಕಾರ ಚಲಾಯಿಸುವ ವಿಧಾನಗಳು ಈ ಪಠ್ಯದ ಪ್ರಮುಖ ಅಧ್ಯಯನ ವಿಷಯಗಳಾಗಿದ್ದವು. 13ನೇ ಮತ್ತು 14ನೇ ಶತಮಾನಗಳ ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳನ್ನೂ ಇದರಲ್ಲಿ ಅಧ್ಯಯನ ಮಾಡಲಾಗುತ್ತಿತ್ತು. ಉತ್ತರ ಭಾರತದ ಇತಿಹಾಸ, ಸುಮಾರು 1400-1550′ ಎಂಬ ಮತ್ತೊಂದು ಸ್ನಾತಕೋತ್ತರ ಪಠ್ಯವನ್ನೂ ಸೆಮಿಸ್ಟರ್ IIರ ಪರಿಷ್ಕೃತ ಪಠ್ಯಕ್ರಮದಿಂದ ಕೈಬಿಡಲಾಗಿದೆ.:ಪಠ್ಯಕ್ರಮದಲ್ಲಿನ ಬದಲಾವಣೆಗಳು ಮಧ್ಯಕಾಲೀನ ಇತಿಹಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ಅಂತಿಮ ಸೆಮಿಸ್ಟರ್ || ಪಠ್ಯಕ್ರಮದಲ್ಲಿ ‘ಆರಂಭಿಕ ಭಾರತದಲ್ಲಿ ಲಿಂಗ ಮತ್ತು ಮಹಿಳೆಯರು: 1500 BCE ರಿಂದ 1000 CE, ‘ಪ್ರಾಚೀನ ಭಾರತದಲ್ಲಿ ರಾಜಕೀಯ ಪ್ರಕ್ರಿಯೆಗಳು ಮತ್ತು ರಚನೆ’ ಹಾಗೂ ‘ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಧರ್ಮ ಮತ್ತು ಸಮಾಜ ಎಂಬ ಪಠ್ಯಗಳೂ ಸ್ಥಾನ ಪಡೆದಿಲ್ಲ.38 ಪ್ರಸ್ತಾವಿತ ಪಠ್ಯಗಳಲ್ಲಿ 16 ಮಾತ್ರ ಸೇರ್ಪಡೆDUಯ ಇತಿಹಾಸ ವಿಭಾಗವು ಸೆಮಿಸ್ಟರ್ IIIಗೆ 38 DSE ಪಠ್ಯಗಳನ್ನು ಪ್ರಸ್ತಾಪಿಸಿತ್ತು.

ಆದರೆ, ಅಂತಿಮವಾಗಿ ಪ್ರಕಟಿಸಿದ ಪಠ್ಯಕ್ರಮದಲ್ಲಿ 16 ಪಠ್ಯಗಳನ್ನು ಮಾತ್ರ ಸೇರಿಸಲಾಗಿದೆ. ಅಂದರೆ, ಪ್ರಸ್ತಾಪಿಸಿದ್ದ 38 ಪಠ್ಯಗಳ ಪೈಕಿ 22 ಪಠ್ಯಗಳನ್ನು ಅಂತಿಮ ಪಠ್ಯಕ್ರಮದಲ್ಲಿ ಸೇರಿಸಲಾಗಿಲ್ಲ.
ವಿಶ್ವವಿದ್ಯಾನಿಲಯದ ಪಠ್ಯಕ್ರಮ ದಾಖಲೆಯ ಪ್ರಕಾರ, ಪರಿಷ್ಕೃತ ಸ್ನಾತಕೋತ್ತರ ಕಾರ್ಯಕ್ರಮವು NEP 2020ರ ಅಡಿಯಲ್ಲಿ ರೂಪಿಸಲಾದ PGCF 2024 ಅನ್ನು ಆಧರಿಸಿದೆ. ಈ ಕಾರ್ಯಕ್ರಮವು ಜುಲೈ 2026ರಿಂದ ಜಾರಿಗೆ ಬರಲಿದೆ.ವಿಶ್ವವಿದ್ಯಾನಿಲಯದ ದಾಖಲೆಗಳಲ್ಲಿ ಹಲವು ಪ್ರಸ್ತಾವಿತ ಪಠ್ಯಗಳನ್ನು ‘ಚರ್ಚೆಯಲ್ಲಿದೆ’ ಅಥವಾ ‘ಚರ್ಚೆಯಾಗಿಲ್ಲ’ ಎಂದು ನಮೂದಿಸಲಾಗಿದೆ. ಅಂತಿಮ ಪಠ್ಯಕ್ರಮದ ಅಧಿಸೂಚನೆಯನ್ನು ಆಗಸ್ಟ್ 7ರಂದು ಹೊರಡಿಸಲಾಗಿದೆ.








