- Advertisement -
- Advertisement -

ಸುಳ್ಯ: ನ್ಯಾಯಾಲಯಕ್ಕೆ ಹಾಜರಾಗದೆ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯನ್ನು ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಸುಳ್ಯ ಪೊಲೀಸ್ ಠಾಣೆಯ ಅ.ಕ್ರ. 33/2021ರಲ್ಲಿ ದಾಖಲಾಗಿರುವ ಐಪಿಸಿ ಕಲಂ 354, 323, 324, 504 ಹಾಗೂ 506ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಮಜಲು ನಿವಾಸಿ ಸುರೇಂದ್ರ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಆತನನ್ನು ಸುಳ್ಯ ಠಾಣೆಯ ಸಿಬ್ಬಂದಿಗಳಾದ HC 368 ರಾಜು ನಾಯ್ಕ್ ಡಿ. ಹಾಗೂ PC 1020 ಸೋಮಯ್ಯ ಹಿರೇಮಠ ಅವರು ಆಲಟ್ಟಿ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಬಳಿಕ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
- Advertisement -








