Friday, May 17, 2024
spot_imgspot_img
spot_imgspot_img

5 ವರ್ಷಗಳ ಅವಧಿಗೆ PFI ನಿಷೇಧ; ಕೇಂದ್ರ ಗೃಹ ಇಲಾಖೆಯ ಆದೇಶ

- Advertisement -G L Acharya panikkar
- Advertisement -

ಬೆಂಗಳೂರು: ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ವನ್ನು 5 ವರ್ಷಗಳ ಕಾಲ ನಿಷೇಧಿಸಿದೆ.

ಕೇಂದ್ರ ಗೃಹ ಸಚಿವಾಲಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಅಥವಾ ಅಂಗಸಂಸ್ಥೆ ಅಥವಾ ರಂಗಗಳನ್ನು ಕಾನೂನುಬಾಹಿರ ಸಂಘ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ UAPA ಕಾಯ್ದೆ ಅಡಿ ಆದೇಶ ಹೊರಡಿಸಿದೆ.

PFI ಮುಖಂಡರ ಮನೆ ಮೇಲೆ ಎನ್‌ಐಎ ದಾಳಿ ಮಾಡಿದ್ದ ಸಂದರ್ಭದಲ್ಲಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರೋ ಹಾಗೂ ದೇಶದಾದ್ಯಂತ ವಿಧ್ವಂಸಕಾರಿ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಖಚಿತ ಸಾಕ್ಷ್ಯಧಾರ ಲಭ್ಯ ಹಿನ್ನೆಲೆ PFI ನಿಷೇಧ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸರ್ಕಾರದ ಮೇಲೆ PFI ಸಂಘಟನೆ ನಿಷೇಧಕ್ಕೆ ಮಾಡಲು ವ್ಯಾಪಕ ಒತ್ತಡ ಕೂಡ ಕೇಳಿ ಬಂದಿತ್ತು.

- Advertisement -

Related news

error: Content is protected !!