Thursday, June 11, 2026
spot_imgspot_img
spot_imgspot_img

ಮಾಜಿ ಸೈನಿಕರಿಗೆ ಗ್ರೂಪ್ ಸಿ ಹುದ್ದೆಗಳಲ್ಲಿ ಶೇ.5 ಮೀಸಲಾತಿ-ಯೋಗಿ ಆದಿತ್ಯನಾಥ್

- Advertisement -
- Advertisement -

ಉತ್ತರಪ್ರದೇಶ: ನೌಕಾಪಡೆ ಮತ್ತು ವಾಯುಪಡೆಯ ಮೂರು ಸೇವೆಗಳಲ್ಲಿ ಕಾರ್ಯ ನಿರ್ವಹಿಸಿ ಯುಪಿಯಲ್ಲಿ ವಾಸವಿರುವ ಮಾಜಿ ಸೈನಿಕರಿಗೆ ಗ್ರೂಪ್ ಸಿ ಹುದ್ದೆಗಳಲ್ಲಿ ಶೇ.5 ಮೀಸಲಾತಿಯನ್ನು ಯೋಗಿ ಆದಿತ್ಯನಾಥ್ ಸರ್ಕಾರ ಕಲ್ಪಿಸಿದೆ.

ಮೀಸಲಾತಿಯನ್ನು ಜಾರಿಗೆ ತರಲು ಉತ್ತರ ಪ್ರದೇಶದ ಸಾರ್ವಜನಿಕ ಸೇವೆ ಕಾಯ್ದೆ 1993 ಕ್ಕೆ ತಿದ್ದುಪಡಿ ಮಾಡಲು ಉತ್ತರ ಪ್ರದೇಶ ರಾಜ್ಯ ಸಚಿವ ಸಂಪುಟವೂ ಅನುಮೋದನೆ ನೀಡಿದೆ .
ಈ ನಿರ್ಧಾರದಿಂದ, ಮಾಜಿ ಅಧಿಕಾರಿಗಳು ಮತ್ತು ಭಾರತೀಯ ಸೇನೆಯ ನೌಕರರ ಮನೋಸ್ಥೈರ್ಯ ಹೆಚ್ಚಾಗುತ್ತದೆ ಮತ್ತು ಅವರ ಕುಟುಂಬಕ್ಕೆ ಬೆಂಬಲ ಸಿಗುತ್ತದೆ” ಎಂದು ಯುಪಿ ಸರ್ಕಾರದ ವಕ್ತಾರರು ಟ್ವೀಟ್ ಮಾಡಿದ್ದಾರೆ.


ಇದರೊಂದಿಗೆ ಸಶಸ್ತ್ರ ಪಡೆಗಳ ಹುತಾತ್ಮ ಸೇವಕನ ಕುಟುಂಬಕ್ಕೆ ನೀಡುವ ಆರ್ಥಿಕ ಸಹಾಯವನ್ನೂ 25 ಲಕ್ಷ ರೂ ಬದಲಾಗಿ 50 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ.

- Advertisement -

Related news

error: Content is protected !!