ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರ ಮಿತಿಮೀರಿದೆ. ಕಳೆದ 24 ಗಂಟೆಗಳಲ್ಲಿ 28,701 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8,78,254ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು. ಕಳೆದ ಒಂದೇ ದಿನದಲ್ಲಿ ಈ ಮಹಾಮಾರಿಗೆ ಸುಮಾರು 500 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 23,174ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.
#IndiaFightsCorona:#COVID19 India UPDATE:
— #IndiaFightsCorona (@COVIDNewsByMIB) July 13, 2020
▪️ Total Cases – 878,254
▪️Active Cases – 301,609
▪️Cured/Discharged- 553,470
▪️Deaths – 23,174
▪️Migrated – 1
as on July 13, 2020 till 8:00 AM pic.twitter.com/oVxwP0d6Fl

ಇನ್ನು ನಿನ್ನೆ 18,850 ಮಂದಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ ದೇಶದಲ್ಲಿ ಗುಣಮುಖರಾದವರ ಸಂಖ್ಯೆ 5,53,471 ಕ್ಕೆ ಏರಿಕೆಯಾಗಿದೆ. ಹೀಗಾಗಿ 3,01,609 ಪ್ರಕರಣಗಳು ಸಕ್ರಿಯವಾಗಿವೆ.
