
ಸುಳ್ಯ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ನೊಂದ ಬಾಲಕಿಯ ಮನೆಯವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.



ಆರೋಪಿ ಕೃಷ್ಣಕುಮಾರ್ ಎಂಬಾತ ಮನೆಯಲ್ಲಿ ಇಬ್ಬರು ಬಾಲಕಿಯರು ಮಾತ್ರ ಇದ್ದಾಗ ಆ ಮನೆಗೆ ತೆರಳಿ ಮನೆಯ ಲ್ಲಿದ್ದ ಹಿರಿಯ ಬಾಲಕಿಯ ಬಳಿ ಬಂದು ನಿಮ್ಮ ತಾಯಿಗೆ 50 ರೂ. ನಾನು ನೀಡಬೇಕಾಗಿದ್ದು ತಾಯಿ ಎಲ್ಲಿದ್ದಾರೆ ಎಂದು ಕೇಳಿದ್ದಾನೆ. ಈ ಸಂದರ್ಭ ಮಕ್ಕಳು ಅಮ್ಮ ಮನೆಯಲ್ಲಿ ಇಲ್ಲ ಕೆಲಸಕ್ಕೆ ಹೋಗಿದ್ದಾರೆ ಎಂದು ಹೇಳಿದಾಗ ಬಾಲಕಿಯ ಬಳಿ ಕುಡಿಯಲು ನೀರು ಕೇಳಿದ್ದು, ಬಾಲಕಿ ಕುಡಿಯಲು ನೀರು ತಂದು ನೀಡಿದಾಗ ಬಾಲಕಿಯ ಕೈಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ.ಈ ಸಂದರ್ಭ ಬಾಲಕಿಯರು ಬೊಬ್ಬೆ ಹಾಕಿದ್ದು, ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಬಾಲಕಿಯ ಮನೆಯವರು ಆರೋಪಿ ಕೃಷ್ಣಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.ದೂರನ್ನು ಸ್ವೀಕರಿಸಿಕೊಂಡ ಸುಳ್ಯ ಪೊಲೀಸರು ಆರೋಪಿ ಕೃಷ್ಣಕುಮಾರ್ ವಿರುದ್ಧ ಪೋಸ್ಕೊ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿ ಕೃಷ್ಣಕುಮಾರ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ.








