Monday, October 5, 2026
spot_imgspot_img
spot_imgspot_img

ವೀಸಾ ನಿಯಮ ಉಲ್ಲಂಘನೆ: ಹೈದರಾಬಾದ್‌ನಲ್ಲಿ 49 ವಿದೇಶಿ ಪ್ರಜೆಗಳ ಪತ್ತೆ; 12 ಮಂದಿ ಗಡಿಪಾರು

- Advertisement -
- Advertisement -

ಹೈದರಾಬಾದ್: ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲಿ ಉಳಿದುಕೊಂಡಿದ್ದ ಹಾಗೂ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದ 49 ವಿದೇಶಿ ಪ್ರಜೆಗಳನ್ನು ಹೈದರಾಬಾದ್ ನಗರ ಪೊಲೀಸರು ಪತ್ತೆಹಚ್ಚಿದ್ದಾರೆ. ಇವರ ಪೈಕಿ 12 ಮಂದಿಯನ್ನು ಈಗಾಗಲೇ ಅವರವರ ದೇಶಗಳಿಗೆ ಗಡಿಪಾರು ಮಾಡಲಾಗಿದೆ.ಆಗಸ್ಟ್ 31, 2026ರಿಂದ ಆರಂಭಗೊಂಡ ವಿಶೇಷ ಜಂಟಿ ಪರಿಶೀಲನಾ ಕಾರ್ಯಾಚರಣೆಯಲ್ಲಿ ಈ ಪ್ರಕರಣಗಳು ಪತ್ತೆಯಾಗಿವೆ. ಉಳಿದ ವಿದೇಶಿ ಪ್ರಜೆಗಳನ್ನು ಗಡಿಪಾರು ಅಥವಾ ದೇಶದಿಂದ ಹೊರಹಾಕುವ ಪ್ರಕ್ರಿಯೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶೀಯರ ಪ್ರಾಂತೀಯ ನೋಂದಣಿ ಕಚೇರಿ, ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಹಾಗೂ ಮಾಹಿತಿ ತಂತ್ರಜ್ಞಾನ ಘಟಕದ ಸಹಯೋಗದಲ್ಲಿ ವಿದೇಶೀಯರ ನಿಗಾವಣೆ ಘಟಕದ ವಿಶೇಷ ಶಾಖೆ ಕಾರ್ಯಾಚರಣೆ ನಡೆಸುತ್ತಿದೆ.ತೋಲಿಚೌಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು 30 ಪ್ರಕರಣಗಳು ಪತ್ತೆಯಾಗಿವೆ. ಲಂಗರ್ ಹೌಸ್ ಮತ್ತು ಮೆಹಿಪಟ್ಟಂ ಠಾಣಾ ವ್ಯಾಪ್ತಿಯಲ್ಲಿ ತಲಾ 6 ಪ್ರಕರಣಗಳು, ರಾಜೇಂದ್ರನಗರದಲ್ಲಿ 3 ಪ್ರಕರಣಗಳು ವರದಿಯಾಗಿವೆ.

ಪತ್ತೆಯಾದವರಲ್ಲಿ ಕೆಲವರು ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದು ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲೇ ಉಳಿದಿರುವುದು ಗೊತ್ತಾಗಿದೆ. ಇನ್ನು ಕೆಲವರು ಆಸ್ಪತ್ರೆಗಳಲ್ಲಿ ವಿದೇಶಿ ರೋಗಿಗಳಿಗೆ ಭಾಷಾಂತರಕಾರರು ಅಥವಾ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.ಹೈದರಾಬಾದ್‌ನಾದ್ಯಂತ ಪರಿಶೀಲನೆ ಮತ್ತು ಜಾರಿ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!