Thursday, September 3, 2026
spot_imgspot_img
spot_imgspot_img

ಉಳ್ಳಾಲ ಸಮುದ್ರದಲ್ಲಿ ಬೋಟ್ ಮುಳುಗಡೆ: 5 ಮಂದಿ ಮೀನುಗಾರರ ರಕ್ಷಣೆ

- Advertisement -
- Advertisement -

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಬೋಟ್‌ವೊಂದು ಸಮುದ್ರದ ಅಲೆಗೆ ಸಿಲುಕಿ ಮುಳುಗಿದ ಘಟನೆ ಉಳ್ಳಾಲ ಅಳಿವೆಬಾಗಿಲು ಬಳಿ ಸಂಭವಿಸಿದೆ.ಶರೀಫ್ ಎಂಬವರಿಗೆ ಸೇರಿದ ಬೋಟ್‌ನಲ್ಲಿ ಮಂಗಳವಾರ ಸಂಜೆ ಐದು ಮಂದಿ ಮೀನುಗಾರಿಕೆಗೆ ತೆರಳಿದ್ದರು.

ಬೋಟು ಸ್ವಲ್ಪ ಮುಂದೆ ಸಾಗಿದಾಗ ಸಮುದ್ರದ ಅಲೆಗೆ ಸಿಲುಕಿ ಬೋಟು ಮುಳುಗಿದೆ. ಈ ವೇಳೆ ಬೋಟ್ ನಲ್ಲಿ ಸಿಲುಕಿದ್ದ ಐವರನ್ನು ಬೇರೆ ಬೋಟ್‌ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಬೋಟು ಮುಳುಗಿ ಅಪಾರ ನಷ್ಟವಾಗಿದೆ ಎಂದು ಶರೀಫ್ ಅಳೇಕಲ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!