Friday, August 7, 2026
spot_imgspot_img
spot_imgspot_img

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ – ಚಾಲಕ ಸ್ಪೋಟ್ ಡೆತ್

- Advertisement -
- Advertisement -

ಹೆಬ್ರಿ: ಹೆಬ್ರಿ ಸಮೀಪ ಶುಕ್ರವಾರ ಸಂಜೆ ವೇಳೆ ಭಾರೀ ಗಾಳಿ ಮಳೆಯಿಂದ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಹೆಬ್ರಿ ಸಂತೆಕಟ್ಟೆಯ ಸದಾನಂದ ನಾಯಕ್ ಎಂದು ಗುರುತಿಸಲಾಗಿದೆ.ಹೆಬ್ರಿಯಿಂದ ಬ್ರಹ್ಮಾವರ ಹೋಗುವ ಮಾರ್ಗದಲ್ಲಿರುವ ಹುರ್ತುಕೆ ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ರಸ್ತೆ ಬದಿಯ ಮರವೊಂದು ಬಿತ್ತೆನ್ನಲಾಗಿದೆ. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಚಾಲಕ ಸದಾನಂದ ನಾಯಕ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಮರವನ್ನು ಕ್ರೇನ್ ಮೂಲಕ ತೆರವುಗೊಳಿಸಿ, ಮೃತದೇಹವನ್ನು ಹೊರಗಡೆ ತೆಗೆಯಲು ಹರಸಹಾಸ ಪಡಲಾಯಿತು. ಸ್ಥಳಕ್ಕೆ ಹೆಬ್ರಿ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!