- Advertisement -
- Advertisement -
ಬಂಟ್ವಾಳ: ಮಾಣಿ ಗ್ರಾಮದ ಹಳಿರದಲ್ಲಿ ಪಿಕಪ್ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.28ರಂದು ಬೆಳಗ್ಗೆ ನಡೆದ ಅಪಘಾತದಲ್ಲಿ ನೆಬಿಸಾ (67) ಮೃತಪಟ್ಟಿದ್ದರು. ಅಪಘಾತದಲ್ಲಿ ಪಿಕಪ್ ಚಾಲಕ ಪಳನಿಸ್ವಾಮಿ ಹಾಗೂ ಕಾರಿನಲ್ಲಿದ್ದ ಮೈಮೂನಾ, ಶಮಾ, ಜುಬೇದಾ ಸೇರಿದಂತೆ ಹಲವರು ಗಾಯಗೊಂಡಿದ್ದರು.
ಪಿಕಪ್ ಚಾಲಕ ಪಳನಿಸ್ವಾಮಿ ನೀಡಿದ ದೂರಿನಂತೆ, ಕಾರು ಚಾಲಕ ಅಕ್ಬರ್ ಅಲಿ ಹೆದ್ದಾರಿಯಲ್ಲಿ ಏಕಾಏಕಿ ಯೂಟರ್ನ್ ಮಾಡಿ ಮಂಗಳೂರು ಕಡೆಗೆ ತಿರುಗಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ.ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 201/2026ರಂತೆ BNS ಕಲಂ 281, 125(A), 125(B), 106(1) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -








