Tuesday, August 18, 2026
spot_imgspot_img
spot_imgspot_img

15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತೆ ಬಂಧನ-ಸುಳ್ಳು ಹೆಸರು, ವಿಳಾಸ ನೀಡಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪ

- Advertisement -
- Advertisement -

ಮಂಗಳೂರು: ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ (Long Pending Case) ವಾರೆಂಟ್ ಆರೋಪಿತೆಯನ್ನು ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.ಬಂಧಿತೆಯನ್ನು ಮೂಡಬಿದಿರೆ ತಾಲೂಕಿನ ಮಿಜಾರು, ಬಡಗಮಿಜಾರು, ಪುತ್ತಿಗೆ ಗ್ರಾಮದ ಹಂಡೇಲ ಮಸೀದಿ ಬಳಿಯ ನಿವಾಸಿ, ದಿ. ಅಬೂಬುಕ್ಕರ್ ಅವರ ಪತ್ನಿ ಸಫಿಯಾ (53) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ 2011ರಲ್ಲಿ ಪ್ರಕರಣ ಸಂಖ್ಯೆ 09/2011 ದಾಖಲಾಗಿತ್ತು. ಅನೈತಿಕ ಸಾಗಣೆ ತಡೆ ಕಾಯ್ದೆ (Prevention of Immoral Trafficking Act)ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವು ಮಂಗಳೂರಿನ ಮಾನ್ಯ 3ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದು, SPLIT CC ನಂ.02/2014 ಹಾಗೂ ಬಳಿಕ LPC ನಂ.10/2019 ಆಗಿ ದೀರ್ಘಕಾಲದಿಂದ ಬಾಕಿ ಉಳಿದಿತ್ತು.

ಸುಳ್ಳು ಹೆಸರು, ವಿಳಾಸ ನೀಡಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪ

ಪೊಲೀಸರ ಪ್ರಕಾರ, ಪ್ರಕರಣ ದಾಖಲಾಗಿದ್ದ ಸಂದರ್ಭದಲ್ಲಿ ಆರೋಪಿತೆ ತನ್ನ ನಿಜವಾದ ಹೆಸರು ಹಾಗೂ ಗುರುತನ್ನು ಮರೆಮಾಚಿ ‘ಆಯಿಷಾ’ (36), ಗಂಡ ಹಸನಬ್ಬ, ಬಂಗಗುಡ್ಡ ಮನೆ, ಗುರುಪುರ, ಮಂಗಳೂರು ಎಂದು ಸುಳ್ಳು ಹೆಸರು, ಗಂಡನ ಹೆಸರು ಹಾಗೂ ವಿಳಾಸವನ್ನು ನೀಡಿದ್ದಳು.

ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆಕೆಯ ಹಾಜರಾತಿಗಾಗಿ ಹಲವು ಬಾರಿ ಎಲ್‌ಪಿಸಿ ವಾರೆಂಟ್ ಹೊರಡಿಸಿದ್ದರೂ, ಆರೋಪಿತೆ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದಳು. ಈ ಅವಧಿಯಲ್ಲಿ ತನ್ನ ಗುರುತು ಮತ್ತು ವಿಳಾಸವನ್ನು ಬದಲಿಸಿಕೊಂಡು ಪೊಲೀಸರ ಹಾಗೂ ನ್ಯಾಯಾಲಯದ ಕೈಗೆ ಸಿಗದೆ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬೆರಳಚ್ಚು ಪರಿಶೀಲನೆಯಿಂದ ನಿಜವಾದ ಗುರುತು ಪತ್ತೆ

ಆರೋಪಿತೆಯ ನಿಜವಾದ ಗುರುತನ್ನು ಪತ್ತೆಹಚ್ಚಲು ಪೊಲೀಸರು ಆಕೆಯ ಬೆರಳಚ್ಚನ್ನು ಪರಿಶೀಲನೆಗೆ ಒಳಪಡಿಸಿದರು. ಮಂಗಳೂರು ಬೆರಳಚ್ಚು ಘಟಕದ ತಜ್ಞರಿಗೆ ಬೆರಳಚ್ಚುಗಳನ್ನು ಕಳುಹಿಸಿ ಪರಿಶೀಲಿಸಿದಾಗ, ‘ಆಯಿಷಾ’ ಹೆಸರಿನಲ್ಲಿ ದಾಖಲಾಗಿದ್ದ ಬೆರಳಚ್ಚುಗಳು 2011ರ ಮಹಿಳಾ ಪೊಲೀಸ್ ಠಾಣೆಯ ಪ್ರಕರಣದ ಕಡತದಲ್ಲಿದ್ದ ಬೆರಳಚ್ಚುಗಳಿಗೆ ಹೊಂದಿಕೆಯಾಗಿರುವುದು ದೃಢಪಟ್ಟಿದೆ.

ಬೆರಳಚ್ಚು ತಜ್ಞರ ವರದಿಯ ಆಧಾರದ ಮೇಲೆ ಆರೋಪಿತೆಯ ನಿಜವಾದ ಹೆಸರು ಸಫಿಯಾ ಎಂಬುದು ಹಾಗೂ ಆಕೆಯ ಪ್ರಸ್ತುತ ಗುರುತು ಮತ್ತು ವಿಳಾಸ ಪತ್ತೆಯಾಗಿದೆ.

ನ್ಯಾಯಾಂಗ ಬಂಧನ ನಂತರ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿತೆ ಸಫಿಯಾಳನ್ನು 2026ರ ಆಗಸ್ಟ್ 18ರಂದು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಳಿಕ ಆಕೆಯನ್ನು ಮಂಗಳೂರಿನ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿತೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಸುಮಾರು 15 ವರ್ಷಗಳಿಂದ ಸುಳ್ಳು ಹೆಸರು ಮತ್ತು ವಿಳಾಸದ ಮೂಲಕ ಪೊಲೀಸರಿಂದ ಹಾಗೂ ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಂಡಿದ್ದ ಆರೋಪಿತೆಯನ್ನು ಬೆರಳಚ್ಚು ಪರಿಶೀಲನೆಯ ಮೂಲಕ ಪತ್ತೆಹಚ್ಚಿ ಬಂಧಿಸಿರುವುದು ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.

- Advertisement -

Related news

error: Content is protected !!