Sunday, May 12, 2024
spot_imgspot_img
spot_imgspot_img

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನ ಬ್ಯಾಂಗ್‌ನಲ್ಲಿ ಹೆಬ್ಬಾವು, ಕಿಂಗ್ ಕೋಬ್ರಾ, ಕಾಪುಚಿನ್ ಮಂಗಗಳು ಸೇರಿದಂತೆ 78 ಪ್ರಾಣಿಗಳು ಪತ್ತೆ

- Advertisement -G L Acharya panikkar
- Advertisement -

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ವ್ಯಕ್ತಿಯ ಬ್ಯಾಗ್‌ನಿಂದ 55 ಬಾಲ್ ಹೆಬ್ಬಾವುಗಳು, 17 ಕಿಂಗ್ ಕೋಬ್ರಾಗಳು ಮತ್ತು ಆರು ಕಾಪುಚಿನ್ ಮಂಗಗಳು ಸೇರಿದಂತೆ 78ಪ್ರಾಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಹೆಬ್ಬಾವುಗಳು ಮತ್ತು ನಾಗರಹಾವುಗಳು ಜೀವಂತವಾಗಿದ್ದು, ಕೋತಿಗಳು ಸತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕಾಕ್‌ನಿಂದ ರಾತ್ರಿ 10:30ಕ್ಕೆ ಫ್ಲೈಟ್ ನಂ. ಎಫ್‌ಡಿ 137 ಏರ್ ಏಷ್ಯಾ ಮೂಲಕ ರಾತ್ರಿ 10:30 ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯ ಬ್ಯಾಗ್‌ನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಒಟ್ಟು 55 ಬಾಲ್ ಹೆಬ್ಬಾವುಗಳು (ವಿವಿಧ ಬಣ್ಣದ) ಮತ್ತು 17 ಕಿಂಗ್ ಕೋಬ್ರಾಗಳನ್ನು ಒಳಗೊಂಡ ಒಟ್ಟು 78 ಪ್ರಾಣಿಗಳು ಇರುವುದು ಕಂಡುಬಂದಿದೆ. ಇವುಗಳು ಜೀವಂತವಾಗಿ ಮತ್ತು ಸಕ್ರಿಯ ಸ್ಥಿತಿಯಲ್ಲಿದ್ದರೂ, ಆರು ಕಪುಚಿನ್ ಮಂಗಗಳು ಸತ್ತಿರುವುದು ಕಂಡುಬಂದಿದೆ ಎಂದು ಬೆಂಗಳೂರು ಕಸ್ಟಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಆರೋಪಿಯನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ,1972ರ ಅಡಿ ಪ್ರಕಾರ ದಾಖಲಾಗಿದೆ.

- Advertisement -

Related news

error: Content is protected !!