Saturday, June 28, 2025
spot_imgspot_img
spot_imgspot_img

8 ವರ್ಷದ ಬಾಲಕಿಯನ್ನು ಮೆಕ್ಯಾನಿಕ್‌ ಶಾಪ್‌ಗೆ ಎಳೆಯೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ ಅರೆಸ್ಟ್‌..!!

- Advertisement -
- Advertisement -
vtv vitla

ಮೆಕ್ಯಾನಿಕ್‌ ಶಾಪ್‌ನಲ್ಲಿ ಕೆಲಸ ಮಾಡುವ ಯುವಕ ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಎಳೆಯೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ನಡೆದಿದೆ.

ಈಜೀಪುರ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಬಾಲಕಿ ಎಂದಿನಂತೆ ಫೆ. 9ರ ಗುರುವಾರ ಬೆಳಗ್ಗೆ‌ 8.15ರ ಸುಮಾರಿಗೆ ಶಾಲೆಗೆ ಹೊರಟಿದ್ದಳು. ಬಾಲಕಿಯ ತಾಯಿಯೇ ನಿತ್ಯ ಶಾಲೆಗೆ ಬಿಟ್ಟು ಬರುತ್ತಿದ್ದರಂತೆ. ಆದರೆ ಘಟನೆಯಾದ ದಿನದಂದು ಶಾಲೆಗೆ ಸಮಯವಾದ ಕಾರಣಕ್ಕೆ ಬಾಲಕಿ ತಾಯಿ ಮುಂದೆ ಹೋಗುತ್ತಿರುವಂತೆ ಹೇಳಿ ಮನೆಗೆ ಬೀಗ ಹಾಕಲು ಮುಂದಾಗಿದ್ದಾರೆ.

ಈ ವೇಳೆ ಶಾಲೆಗೆ ಹೋಗುತ್ತಿದ್ದಾಗ ಬೈಕ್‌ ಮೆಕಾನಿಕ್‌ ಶಾಪ್‌ನಲ್ಲಿ ಕೆಲಸ‌ ಮಾಡುತ್ತಿದ್ದ ಕಾಮುಕ, ಏಕಾಏಕಿ ಬಾಲಕಿಯನ್ನು ಎಳೆದುಕೊಂಡು ಹೋಗಿದ್ದಾನೆ. ಬಳಿಕ ಶಾಪ್‌ ಒಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

“ನನ್ನ ಕೈ ಹಿಡಿದುಕೊಂಡು ನಿನ್ನ ಹೆಸರೇನು ಎಂದು ಕೇಳಿದ. ಎರಡು ನಿಮಿಷ ಮಾತನಾಡಬೇಕು ಬಾ ಎಂದು ನನ್ನನ್ನು ಮೆಕ್ಯಾನಿಕ್‌ ಶಾಪ್‌ಗೆ ಕರೆದುಕೊಂಡು ಹೋದ” ಎಂಬುದಾಗಿ ಬಾಲಕಿಯು ತಾಯಿ ಬಳಿ ಹೇಳಿದ್ದಾಳೆ ಎಂದು ಎಫ್‌ಐಆರ್‌ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತ ಬಾಲಕಿ ಮೆಕ್ಯಾನಿಕ್‌ ಶಾಪ್‌ನಿಂದ ಅಳುತ್ತಾ ಓಡಿ ಬಂದು, ಶಾಪ್‌ನಲ್ಲಿ ನಡೆದ‌ ಘಟನೆಯನ್ನು ತಾಯಿಯ ಮುಂದೆ‌ ವಿವರಿಸಿದ್ದಾಳೆ. ಬಾಲಕಿ ಮಾಹಿತಿ ಮೇರೆಗೆ ತಾಯಿಯಿಂದ ವಿವೇಕನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರವೇ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

- Advertisement -

Related news

error: Content is protected !!