Saturday, May 18, 2024
spot_imgspot_img
spot_imgspot_img

ಅರ್ಪಿತಾಳ 10 ಸೆಕೆಂಡ್‌ ಬೆತ್ತಲೆ ವಿಡಿಯೋ ಕಾಲ್‌ಗೆ 98 ಸಾವಿರ ರೂ. ಕಳೆದುಕೊಂಡ ಯುವಕ

- Advertisement -G L Acharya panikkar
- Advertisement -

ಸಾಮಾಜಿಕ ಜಾಲತಾಣದಲ್ಲಿ ಫೇಕ್‌ ಅಕೌಂಟ್‌ ಬಳಸಿ ಅಮಾಯಕರನ್ನು ಯಮಾರಿಸುವ ಜಾಲ ಸಕ್ರೀಯವಾಗಿದ್ದು, ಇದೀಗ ಇಂತಹುದೇ ಜಾಲಕ್ಕೆ ವಿದ್ಯಾರ್ಥಿಯೋರ್ವ ಸಿಲುಕಿ 10 ಸೆಕೆಂಡ್‌ಗಳ ವಿಡಿಯೋ ಕಾಲ್‌ ಗೆ ಸ್ಪಂದಿಸಿ 98 ಸಾವಿರ ರೂ. ಕಳೆದುಕೊಂಡಿದ್ದು, ಈ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಸರಕಾರದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೋರ್ವನಿಗೆ ಫೇಸ್‌ಬುಕ್‌ನಲ್ಲಿ ಅರ್ಪಿತಾ ಅಗರ್ವಾಲ್‌ ಹೆಸರಿನ ಯುವತಿ ಸೆ.3ರಂದು ಪರಿಚಯವಾಗಿದ್ದಳು. ಮೆಸೆಂಜರ್‌ ಮೂಲಕ ಮಾತಿಗೆ ಇಳಿದ ಅರ್ಪಿತಾ, ಕೆಲವೇ ನಿಮಿಷಗಳಲ್ಲಿ ತಾನು ಆಪ್ತಳು ಎಂಬಂತೆ ನಡೆದುಕೊಂಡಿದ್ದಳು. ಬಳಿಕ ಮೊಬೈಲ್‌ ನಂಬರ್‌ ಕಳುಹಿಸಿಕೊಟ್ಟು ತಡರಾತ್ರಿ ವಿಡಿಯೋ ಕಾಲ್‌ ಮಾಡುವಂತೆ ತಿಳಿಸಿದ್ದಳು. ಯುವಕ ಕೂಡ ತನ್ನ ವೈಯಕ್ತಿಕ ಮೊಬೈಲ್‌ ನಂಬರ್‌ನಿಂದ ಅರ್ಪಿತಾಗೆ ಸೆ.3ರಂದು ರಾತ್ರಿ 9.20ರ ಸುಮಾರಿಗೆ ವಿಡಿಯೋ ಕಾಲ್‌ ಮಾಡಿದಾಗ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, 10 ಸೆಕೆಂಡ್‌ಗಳಲ್ಲಿಯೇ ಯುವಕ ಕರೆ ಕಟ್ ಮಾಡಿದ್ದ.

ಇದಾದ ಕೆಲವೇ ಹೊತ್ತಿನಲ್ಲಿ ಯುವಕನ ವಾಟ್ಸ್ಯಾಪ್‌ಗೆ ಅಶ್ಲೀಲ ವಿಡಿಯೋ ಬಂದಿದ್ದು, ಅದರಲ್ಲಿ ಯವಕನ ಮುಖವನ್ನೂ ಮಾರ್ಫ್‌ ಮಾಡಿ ಬಳಸಲಾಗಿತ್ತು. ಅದಾದ ಬಳಿಕ ಯುವಕನ ನಂಬರ್‌ಗೆ ಬಂದ ವಾಯ್ಸ್‌ ಮೆಸೇಜ್‌ನಲ್ಲಿ ಹೇಳಿದಷ್ಟು ಹಣ ಕಳುಹಿಸದಿದ್ದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಲಾಗಿತ್ತು. ಇದರಿಂದ ಕಂಗಾಲಾದ ಯುವಕ ಹಂತ- ಹಂತವಾಗಿ ವಂಚಕರು ಕಳುಹಿಸಿದ್ದ ಅಕೌಂಟ್‌ ನಂಬರ್‌ಗಳಿಗೆ 98,500 ಕಳಿಸಿದ್ದರು. ಆದರೆ, ವಂಚಕರು ಪುನಃ ಹಣಕ್ಕೆ ಬೇಡಿಕೆ ಇರಿಸಿದ್ದರಿಂದ ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆತ ದೂರು ನೀಡಿದ್ದ ಅರ್ಪಿತಾ ಅಗರ್ವಾಲ್‌ ಎಂಬಾಕೆಯದ್ದು ಫೇಸ್ ಬುಕ್ ಖಾತೆ ನಕಲಿ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

- Advertisement -

Related news

error: Content is protected !!