Saturday, May 11, 2024
spot_imgspot_img
spot_imgspot_img

(ಮೇ.27, 28) ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ವತಿಯಿಂದ ’ಯಕ್ಷಧ್ರುವ ಪಟ್ಲ ಸಂಭ್ರಮ-2023’

- Advertisement -G L Acharya panikkar
- Advertisement -

ಹೈಸ್ಕೂಲ್ ಮತ್ತು ಕಾಲೇಜ್ ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಶ್ರೀ ಕನ್ಯಾನ ಸದಾಶಿವ ಶೆಟ್ಟಿಯವರ ಸಂಭ್ರಮಾಧ್ಯಕ್ಷತೆಯಲ್ಲಿ ’ಯಕ್ಷಧ್ರುವ ಪಟ್ಲ ಸಂಭ್ರಮ-2023’ ಹೈಸ್ಕೂಲ್ ಮತ್ತು ಕಾಲೇಜ್ ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆಯು ಮೇ.27, 28 ರಂದು ಅಡ್ಯಾರ್‍ ಗಾರ್ಡನ್ ಮಂಗಳೂರಿನಲ್ಲಿ ನಡೆಯಲಿದೆ.

ಮೇ.27ರಂದು ಕುಂಬಳೆ ಸುಂದರ ರಾವ್ ವೇದಿಕೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳ ಯಕ್ಷಗಾನ ಬಯಲಾಟ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ ಗಂಟೆ 9 ರಿಂದ ಹಿರಿಯ ವಿದ್ವಾಂಸಕ ಡಾ.ಎಂ ಪ್ರಭಾಕರ ಜೋಷಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ ಪುರಾಣಿಕ್, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಶ್ರೀ ಧರ್ಮಸ್ಥಳ ಮಂಜುನಾಥೇರ್ಶವರ ಕಾನೂನು ಕಾಲೇಜಿನ ಪ್ರಾಂಶುಪಾಲ ತಾರನಾಥ ಶೆಟ್ಟಿ, ಮಹೇಶ್ ಮೋಟಾರ್‍ಸ್‌ನ ಮಾಲಕ ಜಯರಾಮ ಶೇಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮೇ. 28ರಂದು ಡಾ. ಪುತ್ತೂರು ಶ್ರೀಧರ ಭಂಡಾರಿ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಬಯಲಾಟ ಸ್ಪರ್ಧೆ ನಡೆಯಲಿದೆ.
ಮೇ. 28ರಂದು ಬಲಿಪ ನಾರಾಯಣ ಭಾಗವತ ವೇದಿಕೆಯಲ್ಲಿ ಬೆಳಿಗ್ಗೆ 8 ರಿಂದ ಚೌಕಿ ಪೂಜೆ – ಅಬ್ಬರ ತಾಳ ನಡೆಯಲಿದೆ. 8.30 ರಿಂದ ಅಡ್ಯಾರ್ ಕಟ್ಟೆಯಿಂದ ಸಂಭ್ರಮಾಧ್ಯಕ್ಷರೊಂದಿಗೆ ಮೆರವಣಿಗೆ ನಡೆಯಲಿದೆ.

ಬೆಳಿಗ್ಗೆ 9.30 ರಿಂದ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಎಡನೀರು ಮಠ, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಮಾಣಿಲ

ದಿವ್ಯ ಉಪಸ್ಥಿತರಿರುವರು. ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಪ್ರಧಾನ ಅರ್ಚಕ ಶ್ರೀ ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ಮುಂಬೈ ಹೇರಂಬ ಕೆಮಿಕಲ್ ಇಂಡಸ್ಟ್ರೀಸ್ ಲಿ.ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಎಕ್ಸ್‌ಕ್ಲೂಸಿವ್ ನೆಟ್‌ವರ್ಕ್ ನಿರ್ದೇಶಕ CA ದಿವಾಕರ್ ರಾವ್ ಕಟೀಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆ.ಆರ್. ಆಳ್ವ, Former ED Advisor Hudco Government of India, ಡಾ. ಸತೀಶ್ ಭಂಡಾರಿ, ಕುಲಪತಿಗಳು ನಿಟ್ಟೆ ವಿಶ್ವವಿದ್ಯಾಲಯ, ಎಂ.ಆರ್.ವಿ. ರಾಜ, ಜನರಲ್ ಮ್ಯಾನೇಜರ್, HMT Ltd, ಅಶೋಕ್ ಶೆಟ್ಟಿ ಬೆಳ್ಳಾಡಿ, ಮೆರಿಟ್‌ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ.ಲಿ., ಮುಂಬಯಿ, ಚಿತ್ತರಂಜನ್, ಅಧ್ಯಕ್ಷರು, ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರ ಗರೋಡಿ, ಕಂಕನಾಡಿ ಮುಖ್ಯ ಅಥಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಪ್ರಶಾಂತ್ ಮಾರ್ಲ, ನಿರ್ದೇಶಕರು, ಎ.ಜೆ ಆಸ್ಪತ್ರೆ, ಮಂಗಳೂರು ಆರೋಗ್ಯ ಶಿಬಿರ ಉದ್ಘಾಟಿಸಲಿದ್ದಾರೆ. ಡಾ. ಗಣೇಶ್ ಹೆಚ್.ಕೆ, ಎ.ಜೆ ಆಸ್ಪತ್ರೆ, ಮಂಗಳೂರು ರಕ್ತದಾನ ಶಿಬಿರ ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ ಗಂಟೆ 11 ರಿಂದ ’ಯಕ್ಷಗಾನ ಸಪ್ತಸ್ವರ’ ನಡೆಯಲಿದೆ. ಮಧ್ಯಾಹ್ನ ಗಂಟೆ 1 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 2.30 ರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಸಂಜೆ 4 ರಿಂದ ಮಹಿಳಾ ಯಕ್ಷಗಾನ ನಡೆಯಲಿದೆ. ಸಾಯಂಕಾಲ ಗಂಟೆ 5.30 ರಿಂದ ಸಭಾಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!