Sunday, June 29, 2025
spot_imgspot_img
spot_imgspot_img

ನೂತನ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ‘ರಾಜದಂಡ’ ಪ್ರತಿಷ್ಠಾಪನೆ

- Advertisement -
- Advertisement -

ನವದೆಹಲಿ: ನೂತನ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪೀಕರ್ ಪೀಠದ ಸಮೀಪದಲ್ಲಿ ಮಹತ್ವದ ರಾಜದಂಡವನ್ನು ಇಂದು ಪ್ರತಿಷ್ಠಾಪಿಸಿದರು. ಈ ಮೂಲಕ ರಾಜದಂಡವನ್ನು ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಿದಂತೆ ಆಗಿದೆ.

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯ ಆರಂಭದ ಸಂದರ್ಭದಲ್ಲಿ ಪ್ರಧಾನಿ ಮೋದಿ ‘ಸೆಂಗೋಲ್’ ಮುಂದೆ ಗೌರವದ ಸಂಕೇತವಾಗಿ ನಮಸ್ಕರಿಸಿದರು. ಈ ಬಳಿಕ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ತೆರಳಿ, ಸ್ಪೀಕರ್ ಪೀಠದ ಸಮೀಪದಲ್ಲಿ ಅದನ್ನು ಪ್ರತಿಷ್ಠಾಪಿಸಿದ್ದಾರೆ.

ನಿನ್ನ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೆಂಗೋಲ್ ಅನ್ನು ಆಧಿನಾಮ್ ಮಹಾಂತ ಹಸ್ತಾಂತರಿಸಿದ್ದರು. ಇಂದು ನೂತನ ಸಂಸತ್ ಭವನದಲ್ಲಿ ಕೆಲ ವಿಧಿ ವಿಧಾನ, ಪೂಜೆಗಳನ್ನು ನೆರವೇರಿಸಿದಂತ ಪ್ರಧಾನಿ ನರೇಂದ್ರ ಮೋದಿಯವರು ರಾಜದಂಡವನ್ನು ಲೋಕಸಭೆ ಸ್ಪೀಕರ್ ಆಸನದ ಬಳಿ ಪ್ರತಿಷ್ಠಾಪಿಸಿದ್ದಾರೆ.

- Advertisement -

Related news

error: Content is protected !!