

ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ 5 ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಉಚ್ಚಿಲ ನಿವಾಸಿ ಅಬಿದುಲ್ಲಾ ಮತ್ತು ಅಂಬಲಪಾಡಿ ನಿವಾಸಿ ಚಂದ್ರಹಾಸ ಎಂದು ಗುರುತಿಸಲಾಗಿದ್ದು, ಪ್ರಮುಖ ಆರೋಪಿ ದಾಳಿ ವೇಳೆ ತಪ್ಪಿಸಿಕೊಂಡಿದ್ದಾನೆ. ರಕ್ಷಿಸಿದ ಮಹಿಳೆಯರು ಬೆಂಗಳೂರು ಮತ್ತು ಮುಂಬೈಗೆ ಸೇರಿದವರಾಗಿದ್ದಾರೆ. ದಾಳಿಯ ವೇಳೆ 4 ಮೊಬೈಲ್ ಫೋನ್, ರೂ 10000 ನಗದು, ಕಾರು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮಣಿಪಾಲ ಠಾಣಾ ಇನ್ಸ್ ಪೆಕ್ಟರ್ ದೇವರಾಜ್ ಟಿವಿ ಅವರು ತಂಡದೊಂದಿಗೆ ಮಣಿಪಾಲ ವಿದ್ಯಾರತ್ನ ನಗರದಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ಅನೈತಿಕ ಚುಟುವಟಿಕೆ ನಡೆಸಲು ಬಂದ ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸಿ ಕೊಠಡಿಗಳನ್ನು ಒದಗಿಸಿದ್ದ ಅಬಿದುಲ್ಲಾ ಮತ್ತು ಚಂದ್ರಹಾಸ ಅವರನ್ನು ವಶಕ್ಕೆ ಪಡೆದಿದ್ದಾರೆ ಈ ವೇಳೆ ಪ್ರಮುಖ ಆರೋಪಿ ಖಾಲಿದ್ ಪರಾರಿಯಾಗಿದ್ದಾನೆ.