Tuesday, June 9, 2026
spot_imgspot_img
spot_imgspot_img

ಮಂಗಳೂರು: ಪೆಟ್ರೋಲ್ ತುಂಬಿಸಿ ಹಣ ಕೊಡದೆ ಎಸ್ಕೇಪ್‌

- Advertisement -
- Advertisement -

ಮಂಗಳೂರು: ಕಾರಿಗೆ ಪೆಟ್ರೋಲ್ ತುಂಬಿಸಿ ಹಣ ಪಾವತಿಸದೆ ಪರಾರಿಯಾಗಿರುವ ಘಟನೆ ನಡೆದಿದೆ. ಕಾವೂರಿನ ಪೆಟ್ರೋಲ್ ಪಂಪ್‌ನಲ್ಲಿ ಜುಲೈ 20ರಂದು ರಾತ್ರಿ 11.19ಕ್ಕೆ ನೀಲಿ ಬಣ್ಣದ ಕಾರಿಗೆ ಫುಲ್‌ಟ್ಯಾಂಕ್ ಪೆಟ್ರೋಲ್ ತುಂಬಿಸಿದ ಅಪರಿಚಿತ 4,100.60 ರೂ. ಬಿಲ್ ಪಾವತಿಸದೆ ವೇಗವಾಗಿ ಕಾವೂರು ಜಂಕ್ಷನ್ ಕಡೆಗೆ ಪರಾರಿಯಾಗಿದ್ದಾನೆಂದು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆಟ್ರೋಲ್ ಪಂಪ್ ಸಿಬ್ಬಂದಿ ಕಾರನ್ನು ಬೆನ್ನಟ್ಟಿ ನೋಡಿದಾಗ ಕಾರಿನ ಎದುರು ಮತ್ತು ಹಿಂಬದಿ ನೋಂದಣಿ ಸಂಖ್ಯೆ ಇರಲಿಲ್ಲ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!