Saturday, June 28, 2025
spot_imgspot_img
spot_imgspot_img

ಭಾರತಕ್ಕೆ ಬಂದಿಳಿಯಲಿರುವ “ಬಿ777”

- Advertisement -
- Advertisement -

ನವದೆಹಲಿ: ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು ಪ್ರಯಾಣಿಸಲೆಂದೇ ವಿಶೇಷವಾಗಿ ತಯಾರಿಸಲಾಗಿರೋ B777(ಏರ್​ ಇಂಡಿಯಾ ಒನ್) ವಿಮಾನ ಇಂದು ಅಮೆರಿಕಾದಿಂದ ಭಾರತಕ್ಕೆ ಬಂದಿಳಿಯಲಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಐಪಿಗಳು ಪ್ರಯಾಣ ಮಾಡದಿರುವ ಸಂದರ್ಭದಲ್ಲಿ ಬಿ747 ವಿಮಾನವನ್ನ ವಾಣಿಜ್ಯ ಕಾರ್ಯಾಚರಣೆಗಳಿಗೆ ಕೂಡ ಬಳಸಿಕೊಳ್ಳಲಾಗ್ತಿತ್ತು. ಆದ್ರೆ ಬಿ777 ವಿಮಾನ ವಿಶೇಷವಾಗಿ ಗಣ್ಯರ ಪ್ರಯಾಣಕ್ಕೆ ಮಾತ್ರ ಮೀಸಲಾಗಿರಲಿದೆ. ಈ ವಿಮಾನ, ಲಾರ್ಜ್​​​ ಏರ್​ಕ್ರಾಫ್ಟ್​ ಇನ್​ಫ್ರಾರೆಡ್​​ ಕೌಂಟರ್​ ಮೆಶರ್ಸ್​ ಎಂಬ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ  ಹಾಗೂ ಸ್ವಯಂ ರಕ್ಷಣಾ ಸೂಟ್​​ಗಳನ್ನ ಒಳಗೊಂಡಿದೆ. 190 ಮಿಲಿಯನ್​ ಡಾಲರ್(ಅಂದಾಜು ₹1300 ಕೋಟಿ) ಮೊತ್ತಕ್ಕೆ ಇಂಥ ಎರಡು ವಿಮಾನಗಳನ್ನ ಭಾರತಕ್ಕೆ ಪೂರೈಸಲು ಅಮೆರಿಕಾ ಒಪ್ಪಂದ ಮಾಡಿಕೊಂಡಿತ್ತು.

- Advertisement -

Related news

error: Content is protected !!