Saturday, June 6, 2026
spot_imgspot_img
spot_imgspot_img

ಅಕ್ರಮವಾಗಿ ಗ್ಯಾಸ್‌ ಸಿಲಿಂಡರ್‌ ದಾಸ್ತಾನು ; ಓರ್ವನ ಬಂಧನ

- Advertisement -
- Advertisement -

ಅಕ್ರಮವಾಗಿ ನಗರದ ಅಳಕೆ ನ್ಯೂಚಿತ್ರಾ ಮಸೀದಿ ಪಕ್ಕದಲ್ಲಿರುವ ಜನನಿಬಿಡ ವಸತಿ ಸಂಕೀರ್ಣದ ಬಳಿ ಯಾವುದೇ ಪರವಾನಿಗೆ ಇಲ್ಲದೇ ಗ್ಯಾಸ್‌ ಸಿಲಿಂಡರ್‌ ದಾಸ್ತಾನು ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಅಳಕೆ ನ್ಯೂಚಿತ್ರಾ ಮಸೀದಿ ಪಕ್ಕದಲ್ಲಿರುವ ಜನನಿಬಿಡ ವಸತಿ ಸಂಕೀರ್ಣದ ಬಳಿ ಮಂಗಳೂರು ಗ್ಯಾಸ್‌ ಲೈಟ್ ಅಂಡ್ ಸರ್ವೀಸ್ ಸೆಂಟರ್ ಅಂಗಡಿಯ ಪಕ್ಕದ ಸಣ್ಣ ಕೊಠಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಗ್ಯಾಸ್‌ ಸಿಲಿಂಡರ್‌ ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ತಿಳಿದು ಬಂದ ಮಾಹಿತಿಯಂತೆ ದಾಳಿ ಮಾಡಿದ
ಸಂದರ್ಭದಲ್ಲಿ ಅರ್ಧ ಗ್ಯಾಸ್ ತುಂಬಿದ 3 ಗೃಹ ಬಳಕೆಯ ಇಂಡೇನ್ ಮತ್ತು ಹೆಚ್.ಪಿ ಗ್ಯಾಸ್ ಸಿಲಿಂಡರ್ ಗಳು ಸೇರಿದಂತೆ ಒಟ್ಟು 26 ವಿವಿಧ ಆಳತೆಯ ಗ್ಯಾಸ್ ಸಿಲಿಂಡರ್ ಗಳನ್ನು ಪತ್ತೆ ಹಚ್ಚಲಾಗಿದ್ದು  ,ಪ್ರಕರಣಕ್ಕೆ ಸಂಬಂಧಿಸಿದಂತೆ ಅಳಕೆಯ ಶೇಖ್ ಆಶಪ್‌ ಉದ್ದೀನ್ (59) ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

- Advertisement -

Related news

error: Content is protected !!