Sunday, June 29, 2025
spot_imgspot_img
spot_imgspot_img

ವಿಮಾನದಲ್ಲಿ ಪರಿಚಯವಾದ ಯುವತಿಯ ಮೇಲೆ ಅತ್ಯಾಚಾರ; ಆರೋಪಿ ಬಂಧನ

- Advertisement -
- Advertisement -

ಗುಜರಾತ್ ಮೂಲದ ವ್ಯಕ್ತಿ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು, ಗೋವಾದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಉತ್ತರ ಗೋವಾದ ಅಸ್ಸೋನೋರಾ ಗ್ರಾಮದ ರೆಸಾರ್ಟ್‌ನಲ್ಲಿ ಮಹಿಳಾ ಪ್ರವಾಸಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು  ತಿಳಿದಿದೆ.

ಈ ಘಟನೆ ಆಗಸ್ಟ್ 23 ರಂದು ನಡೆದಿದ್ದು, ಯುವತೆಯ  ದೂರಿನ ಆಧಾರದ ಮೇಲೆ ಪೊಲೀಸರು 47 ವರ್ಷದ ಆರೋಪಿಯನ್ನು ಬಂಧಿಸಿದ್ದು, ಈತ ಲಕ್ಷ್ಮಣ್ ಶಿಯಾರ್ ಎಂದು ಗುರುತಿಸಲಾಗಿದೆ.

ಪ್ರವಾಸಿಗರಾಗಿ ಗೋವಾಗೆ ಭೇಟಿ ನೀಡಿದ್ದು , ಸಂತ್ರಸ್ತೆ ಮತ್ತು ಆರೋಪಿ ಈ ಹಿಂದೆ ವಿಮಾನದಲ್ಲಿ ಭೇಟಿಯಾಗಿ ಪರಸ್ಪರ ಸ್ನೇಹ ಬೆಳೆಸಿದ್ದರು. ಅವರ ಸಂಭಾಷಣೆಯ ಸಮಯದಲ್ಲಿ, ಪುರುಷ ಮಹಿಳೆಯ ಫೋನ್ ನಂಬರ್ ತೆಗೆದುಕೊಂಡಿದ್ದು, ನಂತರ ಫೋನ್ ಮೂಲಕ ಅವಳೊಂದಿಗೆ ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಳವಿ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ, ಸಂತ್ರಸ್ತೆ ಮತ್ತು ಪುರುಷ ಪ್ರತ್ಯೇಕವಾಗಿ ಗೋವಾಗೆ ಭೇಟಿ ನೀಡಿದ್ದರು. ಆಗಸ್ಟ್ 23 ರಂದು,  ಮಹಿಳೆಯ ಫೋನ್‌ಗೆ ಕರೆ ಮಾಡಿ, ಅಲ್ಲಿನ ಸೌಕರ್ಯಗಳನ್ನು ತೋರಿಸುವ ನೆಪದಲ್ಲಿ ಅಸ್ಸೋನೋರಾದಲ್ಲಿ ಅವರು ತಂಗಿದ್ದ ರೆಸಾರ್ಟ್‌ಗೆ ಭೇಟಿ ನೀಡುವಂತೆ ಮನವೊಲಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ

- Advertisement -

Related news

error: Content is protected !!