Monday, June 30, 2025
spot_imgspot_img
spot_imgspot_img

ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಕೆಳಗೆ ಬಿದ್ದು ಕಂಡಕ್ಟರ್‌ ಮೃತ್ಯು..!!

- Advertisement -
- Advertisement -

ಮಂಗಳೂರು: ಬಸ್ಸಿನ ಮುಂಭಾಗದ ಫೂಟ್ ಬೋರ್ಡ್ ನಲ್ಲಿ ನಿಂತಿದ್ದ ಕಂಡಕ್ಟರ್ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ನಂತೂರು ವೃತ್ತದ ಬಳಿ ನಡೆದಿದೆ.ಖಾಸಗಿ ಬಸ್ ಕಂಡಕ್ಟರ್ ಹೀರಯ್ಯ (23)ಮೃತಪಟ್ಟ ಯುವಕ.

ಕಾಟಿಪಳ್ಳದಿಂದ ನಂತೂರು ಸರ್ಕಲ್ ಆಗಿ ಮಂಗಳಾದೇವಿಗೆ ತೆರಳುತ್ತಿತ್ತು ಖಾಸಗಿ ಬಸ್ಸಿನಲ್ಲಿ ಮುಂಭಾಗದ ಫೂಟ್ ಬೋರ್ಡ್ ನಲ್ಲಿ ನಿಂತಿದ್ದ ಕಂಡಕ್ಟರ್ ಆಯತಪ್ಪಿ ಕೆಳಗೆ ಬಿದ್ದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತಕ್ಷಣ ಹೀರಯ್ಯ ಅವರನ್ನು ಸಂಚಾರ ಗಸ್ತಿನಲ್ಲಿದ್ದ ಪೊಲೀಸ್‌ ಸಿಬ್ಬಂದಿ ಮತ್ತು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!