Saturday, June 27, 2026
spot_imgspot_img
spot_imgspot_img

ಮಲ್ಪೆ: ಲಾರಿಯಿಂದ ಗ್ರಾನೈಟ್ ಜಾರಿ ಬಿದ್ದು ಇಬ್ಬರು ಕಾರ್ಮಿಕರು ಮೃತ್ಯು..!!

- Advertisement -
- Advertisement -

ಮಲ್ಪೆ: ಲಾರಿಯಿಂದ ಗ್ರಾನೈಟ್ ಜಾರಿ ಬಿದ್ದು, ಇಬ್ಬರು ಒರಿಸ್ಸಾ ಮೂಲಕ ಕಾರ್ಮಿಕರು ಮೃತಪಟ್ಟ ಘಟನೆ ಮಲ್ಪೆ ಸಮೀಪದ ತೊಟ್ಟಂ ಕರಾವಳಿ ಯುವಕ ಮಂಡಲದ ಬಳಿ ಇಂದು ನಡೆದಿದೆ.

ಒರಿಸ್ಸಾದ ರಾಜ್ಯದ ಬಾಬುಲ್ಲ (35) ಹಾಗೂ ಭಾಸ್ಕರ(35) ಮೃತ ಕಾರ್ಮಿಕರು. ನಿರ್ಮಾಣ ಹಂತದಲ್ಲಿರುವ ಮನೆಯೊಂದಕ್ಕೆ ತರಲಾದ ಗ್ರಾನೈಟ್‌ ಲಾರಿಯಿಂದ ಇಳಿಸುತ್ತಿದ್ದ ವೇಳೆ ಗ್ರಾನೈಟ್ ಜಾರಿ ಕಾರ್ಮಿಕರ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.

ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!