


ಮಾನಸಿಕ ಅಸ್ವಸ್ಥನ ಹೊಟ್ಟೆಯ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೋರ್ವರಿಗೆ ಆತನ ಹೊಟ್ಟೆಯಲ್ಲಿದ್ದ ಇಯರ್ ಫೋನ್, ಲಾಕೆಟ್‌ಗಳು, ಸ್ಕ್ರೂಗಳು, ಸೇಫ್ಟಿ ಪಿನ್‌ಗಳು, ಶರ್ಟ್ ಬಟನ್‌ಗಳು ಹಾಗೂ ರಾಖಿಗಳನ್ನು ಹೊರತೆಗೆದ ವೈದ್ಯರು ದಿಗ್ಭ್ರಮೆಗೊಂಡಿದ್ದಾರೆ. ಈ ಘಟನೆ ಪಂಜಾಬಿನಲ್ಲಿ ನಡೆದಿದೆ.
40 ರ ಹರೆಯದ ಮಾನಸಿಕ ಅಸ್ವಸ್ಥನೋರ್ವ ದೀರ್ಘಕಾಲದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಎನ್ನಲಾಗಿದೆ. ಇದರಿಂದ ಈತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದು, ಈತನ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಹೊರತೆಗೆದಿದ್ದಾರೆ.
ಈ ವಸ್ತುಗಳನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸಖತ್ ವೈರಲ್ ಆಗಿದೆ. ರೋಗಿಯು ಕಳೆದ ಎರಡು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಜ್ವರ ಮತ್ತು ವಾಂತಿ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಸಂದರ್ಭದಲ್ಲಿ ವೈದ್ಯರಿಗೆ ಇದೆಲ್ಲ ತಿಂದಿರುವುದು ಗಮನಕ್ಕೆ ಬಂದಿದ್ದು, ನಂತರ ಶಸ್ತ್ರಚಿಕಿತ್ಸೆ ನಡೆಸುವ ನಿರ್ಧಾರ ಮಾಡಲು ಬಂದೆವು ಎಂದು ಮೆಗಾ ಮೆಡಿಸಿಟಿ ಆಸ್ಪತ್ರೆಗೆಯ ನಿರ್ದೇಶಕರು ಹೇಳಿದ್ದಾರೆ.