Sunday, August 2, 2026
spot_imgspot_img
spot_imgspot_img

ಬಂಟ್ವಾಳ: ಕೂಲಿ ಕಾರ್ಮಿಕನ ತಲೆ ಮೇಲೆ ಸಿಮೆಂಟ್‌ ಕಂಬ ದೂಡಿ ಹಾಕಿ ಮಾರಣಾಂತಿಕ ಹಲ್ಲೆ …!ಕಾರ್ಮಿಕನ ಸ್ಥಿತಿ ಗಂಭೀರ; ಕೊಲೆಯತ್ನ ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ: ಕೂಲಿ ಕಾರ್ಮಿಕನ ತಲೆ ಮೇಲೆ ಸಿಮೆಂಟ್‌ ಕಂಬ ದೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸೇನೆರೆಕೋಡಿ ಎಂಬಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸೇನೆರೆಕೋಡಿ ರವಿಶಂಕರ್‌ ಎಂಬವರ ಹೆಂಡತಿ ಹೆಸರಿನಲ್ಲಿರುವ ತೋಟಕ್ಕೆ ಗಾಡ್‌ಫ್ರಿ ಪಾಷನ, ರೂಪ ಪ್ರಿಯ ದಿ ಸೋಜಾ, ಗ್ಲೆನ್‌ಶಾ ರಿಶಾನ್‌, ಗ್ಲೇಶನ್‌ ಪಾಷನ ಎಂಬವರು ಅಕ್ರಮ ಪ್ರವೇಶ ಮಾಡಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ.

ಕೆಲಸಗಾರರ ಪೈಕಿ ರಾಮಾಕಾಂತ ಎಂಬವರನ್ನು ದೂಡಿ ಹಾಕಿ, ಕೊಲೆ ಮಾಡುವ ಉದ್ದೇಶದಿಂದ ಸಿಮೆಂಟ್‌ ಕಂಬವನ್ನು ಆತನ ತಲೆ ಮೇಲೆ ದೂಡಿ ಹಾಕುವ ಸಂದರ್ಭದಲ್ಲಿ ರಾಮಾಕಾಂತ ತಲೆಯನ್ನು ತಪ್ಪಿಸಿದಾಗ ಬೆನ್ನಿಗೆ ಬಿದ್ದು, ತೀವ್ರವಾಗಿ ಗಾಯಗೊಡಿದ್ದಾರೆ.

ಗಾಯಾಳು ಸರಕಾರಿ ಆಸ್ಪತ್ರೆ ಬಂಟ್ವಾಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಬಗ್ಗೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್ 1850(U/s-447,504,324,307,506,34) ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!