Sunday, June 7, 2026
spot_imgspot_img
spot_imgspot_img

ಬೈಕ್ ಟ್ಯಾಂಕರ್‍ ನಡುವೆ ಭೀಕರ ಅಪಘಾತ : ಸವಾರ ಸಾವು..!

- Advertisement -
- Advertisement -

ಬೈಕ್​ಗೆ ಟ್ಯಾಂಕರ್‍ ಲಾರಿ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ 44 ರ ಹಾರೋಬಂಡೆ ಗ್ರಾಮದ ಬಳಿ ನಡೆದಿದೆ.

ಚಲಿಸುತ್ತಿದ್ದ ಬೈಕ್​ಗೆ ಟ್ಯಾಂಕರ್‍ ಲಾರಿ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿದ್ದು , ಅಪಘಾತದ ಹೊಡೆತಕ್ಕೆ ಟ್ಯಾಂಕರ್‍ ಹೊತ್ತಿ ಉರಿದಿದೆ. ಲಾರಿಯಡಿ ಸಿಲುಕಿದ ಬೈಕ್​ಗೆ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಇಡೀ ಲಾರಿಗೆ ವ್ಯಾಪಿಸಿದೆ.

ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್ ಠಾಣೆ ಸಮೀಪದಲ್ಲೇ ಅಪಘಾತ ನಡೆದಿದೆ. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!