Monday, June 8, 2026
spot_imgspot_img
spot_imgspot_img

ಹೆರಿಗೆ ಮಾಡಿಸಲು ಲಂಚಕ್ಕೆ ಬೇಡಿಕೆ‌ಯಿಟ್ಟಿದ್ದ ಸರ್ಕಾರಿ ವೈದ್ಯ ಲೋಕಾಯುಕ್ತ ಬಲೆಗೆ

- Advertisement -
- Advertisement -

ಹೆರಿಗೆ ಮಾಡಿಸಲು 3 ಸಾವಿರ ಲಂಚಕ್ಕೆ ಬೇಡಿಕೆ‌ಯಿಟ್ಟಿದ್ದ ಸರ್ಕಾರಿ ವೈದ್ಯನೊಬ್ಬ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಡಾ.ಹರಿಪ್ರಸಾದ್ (44) ಎಂಬಾತ ಲೋಕಾಯುಕ್ತ ಬಲೆಗೆ ಬಿದ್ದ ವೈದ್ಯನಾಗಿದ್ದಾನೆ.

ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಹರಿಪ್ರಸಾದ್ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲು 3 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಮಹಿಳೆ ಸಂಬಂಧಿಯೊಬ್ಬರು ದೂರು ನೀಡಿದ್ದರು.ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು,ರೆಡ್​ಹ್ಯಾಂಡ್​ ಆಗಿ ವೈದ್ಯ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ಇನ್ಸ್‍ಪೆಕ್ಟರ್ ರಾಮ ರೆಡ್ಡಿ, ಸಲೀಂ ಅಹ್ಮದ್ ಹಾಗೂ ಶಿವರುದ್ರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಈ ಕುರಿತು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

- Advertisement -

Related news

error: Content is protected !!