Thursday, July 3, 2025
spot_imgspot_img
spot_imgspot_img

ಕಾಸರಗೋಡು: ಸರಕಾರಿ ಹೈಸ್ಕೂಲಿನ ಶಿಕ್ಷಕಿ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿ

- Advertisement -
- Advertisement -

ಕಾಸರಗೋಡು: ಶಿಕ್ಷಕಿಯ ಕುತ್ತಿಗೆಯಿಂದ ಚಿನ್ನಾಭರಣದ ಸರ ಎಗರಿಸಿದ ಘಟನೆ ಬದಿಯಡ್ಕದಲ್ಲಿ ನಡೆದಿದೆ.

ಬದಿಯಡ್ಕ ಸರಕಾರಿ ಹೈಸ್ಕೂಲಿನ ಶಿಕ್ಷಕಿ ಅಶ್ವತಿ ಅವರು ಬೆಳಿಗ್ಗೆ ಬೋಳು ಕಟ್ಟೆಯಲ್ಲಿರುವ ಮನೆಯಿಂದ ಒಳ ದಾರಿಯಾಗಿ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಹಿಂಬದಿಯಿಂದ ಬಂದ ಸವಾರನೋರ್ವ ಸರ ಎಗರಿಸಿದ್ದಾನೆ. ಇನ್ನು ಶಿಕ್ಷಕಿ ಸರವನ್ನು ಗಟ್ಟಿಯಾಗಿ ಹಿಡಿದರಿಂದ ಅರ್ಧದಷ್ಟು ಸರ ಮಾತ್ರ ಈತ ಎಗರಿಸಿ ಪರಾರಿಯಾಗಿದ್ದಾನೆ. ಶಿಕ್ಷಕಿ ಆಶ್ವತಿ ಬದಿಯಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ್ದಾರೆ. ತಿಂಗಳ ಹಿಂದೆ ಈ ಪರಿಸರದಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಸರ ಅಪಹರಿಸಿದ ಪ್ರಕರಣವೂ ನಡೆದಿತ್ತು.

- Advertisement -

Related news

error: Content is protected !!