Thursday, July 23, 2026
spot_imgspot_img
spot_imgspot_img

ಹೋರಿ ತಿವಿತಕ್ಕೆ ಯುವಕ ಬಲಿ..!

- Advertisement -
- Advertisement -

ಹೋರಿ ಹಬ್ಬ ವೀಕ್ಷಿಸಲು ಹೋದ ಯುವಕನಿಗೆ ಹೋರಿ ತಿವಿದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮೃತಪಟ್ಟ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ನಿವಾಸಿ ಪುನೀತ್ ಆಚಾರ್ (19) ಎಂದು ಗುರುತಿಸಲಾಗಿದೆ.

ಯುವಕ ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಹೋಗಿದ್ದ ಹೋರಿ ತಿವಿದು ಕುಸಿದುಬಿದ್ದ ಯುವಕನನ್ನ ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದು ತರುವಾಗ ಆತ ಮಾರ್ಗ ಮದ್ಯದಲ್ಲಿಯೇ ಸಾವನ್ಬಪ್ಪಿದ್ದಾನೆ. ತಾಲೂಕಿನಲ್ಲಿ ಹೋರಿ ಹಬ್ಬಕ್ಕೆ ಇದು ಎರಡನೇ ಸಾವಾಗಿದೆ.

ಯುವಕ ಪಟ್ಟಣದಲ್ಲಿ ಐಟಿಐ ನಲ್ಲಿ ವ್ಯಾಸಂಗ ಮಾಡುತ್ತಿದ್ದನು. ನಿನ್ನೆ ಕಲ್ಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋರಿ ಸ್ಪರ್ಧೆ ವೀಕ್ಷಿಸಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಪುನೀತ್ ತಂದೆ ಗಜೇಂದ್ರ ಆಚಾರ್ ಹೋರಿ ಆಯೋಜಕರ ವಿರುದ್ಧ ಕ್ರಮ ಜರುಗಿಸುವಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ತರಲಘಟ್ಟದ ಯುವಕ‌ ಜನವರಿಯಲ್ಲಿ ಹೋರಿ ಹಬ್ಬ ನೋಡಲು ಹೋದ ಯುವಕ ಸಾವನ್ಬಪ್ಪಿದ್ದು ಆತನ ಬಡ ಕುಟುಂಬ ಬೀದಿಗೆ ಬಂದಿತ್ತು.

- Advertisement -

Related news

error: Content is protected !!