Friday, July 4, 2025
spot_imgspot_img
spot_imgspot_img

(ಮಾ.3- 5) ಕುತ್ಯಾರು ಇರಂದಾಡಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ನವೀಕೃತ ಶಿಲಾಮಯ ದೈವಾಲಯ ಸಮರ್ಪಣೋತ್ಸವ

- Advertisement -
- Advertisement -

ಉಡುಪಿ ಜಿಲ್ಲೆಯ ಕಾಪು ತಾಲೂಕು ಕುತ್ಯಾರು ಗ್ರಾಮದ ಇರಂದಾಡಿ ಶ್ರೀ ಬಬ್ಬುಸ್ವಾಮಿ ಪರಿವಾರ ದೈವಗಳ ನೂತನ ಶಿಲಾಮಯ ಆವರ್ಕ ಆರೂಢದ ನವೀಕೃತ ದೈವಾಲಯ ಸಮರ್ಪಣೋತ್ಸವ ಕಾರ್ಯಕ್ರಮವು ದಿನಾಂಕ 03-03-2024ನೇ ರವಿವಾರದಿಂದ 05-03-2024 ರವರೆಗೆ ನಡೆಯಲಿದೆ.

03-03-2024ರ ಸಂಜೆ, ಘಂಟೆ 6-00ರಿಂದ ಆಲಯ ಪ್ರತಿಗ್ರಹ, ಶಿಲ್ಪ ಪೂಜೆ, ಮಹಾಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ, ಸಪ್ತಶುದ್ದಿ, ಗೋಪ್ರವೇಶ, ವಾಸ್ತುಪೂಜೆ, ವಾಸ್ತುಹೋಮ, ರಾಘ್ನ ಹೋಮ, ದಿಕ್ಷಾಲ ಬಲಿ, ಬಾಲಾಲಯದಿಂದ ಸಾನ್ನಿಧ್ಯಕ್ಕೆ ತಂದು ಬಿಂಬಾಧಿವಾಸ, ಕಲಶ ಮಂಡಲ ರಚನೆ, ಕಲಶಾಧಿವಾಸ, ರಕ್ಷೆ ನಡೆಯಲಿದೆ.

ದಿನಾಂಕ 04-03-2024ನೇ ಸೋಮವಾರ ಬೆಳಿಗ್ಗೆ ದೈವ ಪುನಃಪ್ರತಿಷ್ಠೆ-ಸಾನ್ನಿಧ್ಯ ಕಲಶೋತ್ಸವ-ದೈವ ಸಂದರ್ಶನ ನಡೆಯಲಿದೆ ಬಳಿಕ ಘಂಟೆ 12-30ರಿಂದ ಮಹಾಅನ್ನಸಂತರ್ಪಣೆ ಜರಗಳಿದೆ. ಸಾಯಂಕಾಲ ಘಂಟೆ 7-00ರಿಂದ ಶ್ರೀ ದೈವಗಳ ಭಂಡಾರ ಇಳಿದು ಸಾನ್ನಿಧ್ಯಾಭಿವೃದ್ಧಿಗೋಸ್ಕರ ವೈಭವದ ನೇಮೋತ್ಸವ ಮುಂತಾದ ಧಾರ್ಮಿಕ ಸತ್ಯರ್ಮಗಳು ಎಲ್ಲೂರು ಸೀಮೆಯ ಪ್ರಧಾನ ತಂತ್ರಿಗಳಾದ ವೇ|| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಎಲ್ಲೂರು ದೇವಳದ ಪ್ರಧಾನ ಅರ್ಚಕ ದೇ! ಮೂ! ಎಲ್ಲೂರು ಶ್ರೀ ಕೃಷ್ಣಮೂರ್ತಿ ಭಟ್ಟರ ಸಹಕಾರದೊಂದಿಗೆ ನೆರವೇರಲಿರುವುದು.

ದಿನಾಂಕ 05-03-2024 ನೇ ಮಂಗಳವಾರ ಬೆಳಿಗ್ಗೆ ಘಂಟೆ 9-00ರಿಂದ ಶ್ರೀ ಧೂಮಾವತಿ ದೈವದ ನೇಮೋತ್ಸವ , ಹಾಲಾವಳೇ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

- Advertisement -

Related news

error: Content is protected !!