Sunday, August 2, 2026
spot_imgspot_img
spot_imgspot_img

ಬಂಟ್ವಾಳ: ನೇತ್ರಾವತಿ ನದಿಗೆ ಸ್ನಾನಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಯುವಕ ಮೃತ್ಯು

- Advertisement -
- Advertisement -

ಬಂಟ್ವಾಳ: ಯುವಕನೋರ್ವನು ತನ್ನ ಸ್ನೇಹಿತರ ಜೊತೆ ನೇತ್ರಾವತಿ ನದಿಗೆ ಸ್ನಾನಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನರಿಕೊಂಬು ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ನರಿಕೊಂಬು ಗ್ರಾಮದ ಅಂತರ ಕಲ್ಯಾರು ನಿವಾಸಿ ಪೈಂಟರ್ ಯೋಗೀಶ ಅವರ ಪುತ್ರ ಅನೂಶ್ ಎಂದು ಗುರುತಿಸಲಾಗಿದೆ.

ಆದಿತ್ಯವಾರ ರಜಾದಿನವಾದ ಕಾರಣ ಅನುಶ್ ಸ್ನೇಹಿತರ ಜೊತೆಯಲ್ಲಿ ನೇತ್ರಾವತಿ ನದಿಗೆ ಸ್ನಾನಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ ಮಾಹಿತಿ ತಿಳಿದು ನೂರಾರು ಜನರ ಪ್ರಾಣ ರಕ್ಷಿಸಿದ ಪಾಣೆಮಂಗಳೂರು ಗೂಡಿನಬಳಿಯ ನೇತ್ರಾವತಿ ಮುಳುಗುತಜ್ಞರಾದ
ಮುಹಮ್ಮದ್ @ಮಮ್ಮ. ಹನೀಫ್ ಬಾಯ್. ಇಂತಿಯಾಜ್. ರಹಿಮಾನ್ ಕೀಳಂಗಡಿ. ಅಶ್ಫಾಕ್ ಅಕ್ಕರಂಗಡಿ ತಂಡ ನದಿ ನೀರಿನಲ್ಲಿ ಹುಡುಕಾಡಿ ಮೇಲಕ್ಕೆತ್ತಿದ್ದರೂ ಅಷ್ಟರಲ್ಲಾಗಲೇ ಯುವಕ ಮೃತಪಟ್ಟಿದ್ದಾನೆ.
ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!