Thursday, June 4, 2026
spot_imgspot_img
spot_imgspot_img

ಬೆಳ್ತಂಗಡಿ: ಸಾಕು ನಾಯಿ ಮನೆ ಮಾಲಕಿ ಮೇಲೆ ದಾಳಿ : ಮಹಿಳೆ ಗಂಭೀರ

- Advertisement -
- Advertisement -

ಬೆಳ್ತಂಗಡಿ: ತನ್ನ ಮನೆಯ ಸಾಕು ನಾಯಿ ಮನೆ ಮಾಲಕಿ ಮೇಲೆ ಏಕಾಏಕಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಇಂದು ಮಧ್ಯಾಹ್ನ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ನಡೆದಿದೆ.

ಮುಂಡಾಜೆ ಗ್ರಾಮದ ನಿಡಿಗಲ್ ಓಂಕಾರ್ ನಿವಾಸಿ ದಿ.ರಾಮ್ ದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ (49) ಎಂಬವರು ತನ್ನ ಮನೆಯ ಸಾಕು ನಾಯಿಯ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆಯಾಗಿದ್ದಾರೆ.

ಪೂರ್ಣಿಮಾ ತನ್ನ ಮನೆಯಲ್ಲಿ ಸಾಕಿದ್ದ ಸಾಕು ನಾಯಿ ಜತೆ ಎಂದಿನಂತೆ ಎ.18ರಂದು ಆಟವಾಡುತ್ತಿದ್ದರು. ಈ ವೇಳೆ ಮಹಿಳೆ ಕಾಲು ಜಾರಿ ನೆಲಕ್ಕೆ ಜಾರಿಬಿದ್ದ ವೇಳೆ ಸಾಕು ನಾಯಿ ಮಹಿಳೆಯ ಮೇಲೆ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿದ್ದು. ಕೈಗೆ ಕಚ್ಚಿ ಗಂಭೀರ ಗಾಯಮಾಡಿದೆ.

ಮನೆಯವರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

- Advertisement -

Related news

error: Content is protected !!