Tuesday, April 30, 2024
spot_imgspot_img
spot_imgspot_img

ದೇಶವಾಸಿಗಳಿಗೆ ಜನನಾಯಕನ ಸಂದೇಶ!!

- Advertisement -G L Acharya panikkar
- Advertisement -

ನವದೆಹಲಿ : ಹಬ್ಬಗಳ ಸಂಭ್ರಮದ ನಡುವೆ ಕೊರೊನಾವೈರಸ್ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ದೇಶದ ಪ್ರಜೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, . ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ಜನತಾ ಕರ್ಫ್ಯೂನಿಂದ ಹಿಡಿದು ಇಲ್ಲಿಯ ತನಕ ನಿರಂತರ ಹೋರಾಟ ಮಾಡುತ್ತಿದ್ದೇವೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಾವಿನ ಪ್ರಮಾಣವೂ ಕಡಿಮೆಯಾಗಿದ್ದು, ಇಂಥ ಸಂದರ್ಭದಲ್ಲಿ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಬೇಕಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶ:

  • ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಸಹ ಹದಗೆಟ್ಟಿದೆ.ಲಾಕ್ ಡೌನ್ ಮುಗಿದಿದೆ ಎಂದರೆ ವೈರಸ್ ಹೋಗಿದೆ ಎಂದು ಅರ್ಥವಲ್ಲ.
    ನೀವು ಕೊರೊನಾವೈರಸ್ ಬಗ್ಗೆ ಮರೆತಿದ್ದಿರಿ.. ಮಾಸ್ಕ್ ಇಲ್ಲದೇ ಓಡಾಡುತಿರುವಿರಿ.. ಇದರಿಂದ ನಿಮ್ಮ ಕುಟುಂಬವನ್ನು ನೀವು ಅಪಾಯಕ್ಕೆ ದೂಡುತ್ತಿದ್ದೀರಿ.
  • ವ್ಯಾಕ್ಸಿನ್ ಬರುವ ತನಕ ಕೋವಿಡ್ ಹೋಗಿದೆ ಎಂದು ಅಂದುಕೊಳ್ಳಬೇಡಿ. ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅಪಾಯ ಉಂಟು ಮಾಡು ಮಾಡುತ್ತದೆ.
    ಹಲವು ದೇಶಗಳು ವ್ಯಾಕ್ಸಿನ್ ಕಂಡುಹಿಡಿಯಲು ಪ್ರಯತ್ನ ನಡೆಸಿವೆ. ಭಾರತದಲ್ಲಿ ಸಹ ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕೆಲವು ಸಂಶೋಧನೆ ಉತ್ತಮ ಹಂತದಲ್ಲಿದೆ. ಕೆಲವು ಮೂಲ ಹಂತದಲ್ಲಿದೆ.
  • ಲಸಿಕೆ ಬಂದಾಗ ಅದನ್ನು ಪ್ರತಿ ಭಾರತೀಯನ ಬಳಿ ತಲುಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಔಷಧ ಸಿಗುವ ತನಕ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಪದೇ-ಕೈ ತೊಳೆಯುವುದನ್ನು ಮರೆಯಬೇಡಿ.
  • ಹಬ್ಬದ ಸಂದರ್ಭದಲ್ಲಿ ಕೋವಿಡ್ ಬಗ್ಗೆ ಜಾಗೃತವಾಗಿರಿ ಎಂದು ಹೇಳಿದ ಮೋದಿ ದೇಶದ ಎಲ್ಲಾ ಜನರಿಗೆ ನವರಾತ್ರಿ, ಈದ್ ಮಿಲಾದ್, ದೀಪಾವಳಿ ಶುಭಾಶಯ ಕೋರಿದರು.
  • ನಾವು ಮೈಮರೆತರೆ ನಮ್ಮ ದೇಶವನ್ನು ನಾವೇ ಮೃತ್ಯುಕೂಪಕ್ಕೆ ತಳ್ಳಿದಂತಾಗುತ್ತದೆ. ಅಪಾಯವನ್ನು ಎದುರಿಸಬೇಕಾಗುತ್ತದೆ. ದೇಶದಲ್ಲಿ ಮರಣ ಪ್ರಮಾಣ 10 ಲಕ್ಷಕ್ಕೆ 83ರಷ್ಟಿದೆ.
  • ಕೋವಿಡ್ ಸೋಂಕಿತರಿಗೆ ಸಿಕಿತ್ಸೆ ನೀಡಲು ದೇಶದಲ್ಲಿ 90 ಸಾವಿರ ಹಾಸಿಗೆಗಳು ಲಭ್ಯವಿದೆ. 12 ಸಾವಿರ ಕ್ವಾರಂಟೈನ್ ಕೇಂದ್ರಗಳಿದ್ದು ದೇಶ ಕೊರೂನ ಎದುರಿಸಲು ಸಮರ್ಥವಾಗಿದೆ ಎಂದು ತಿಳಿಸಿದರು.
- Advertisement -

Related news

error: Content is protected !!