Tuesday, August 18, 2026
spot_imgspot_img
spot_imgspot_img

ಆಟವಾಡುತ್ತ ಸಂಪ್​ಗೆ ಬಿದ್ದು 2 ವರ್ಷದ ಮಗು ಸಾವು..!

- Advertisement -
- Advertisement -

ಬೆಳಗಾವಿ: ಆಟವಾಡುತ್ತ ಸಂಪ್​ಗೆ ಬಿದ್ದು 2 ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ.

ಮೃತಪಟ್ಟ ಮಗುವನ್ನು ಸಾಯೀಶಾ ಸಂದೀಪ್ ಬಡವನಾಚೆ(2) ಎಂದು ಗುರುತಿಸಲಾಗಿದೆ.

ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿಯಾಗಿತ್ತು. ಕಣ್ಮರೆಯಾಗಿದ್ದ ಮಗುವಿಗಾಗಿ ಪೋಷಕರಿಗೆ ಹುಡುಕಾಟ ಆರಂಭಿಸಿದರು. ಎಷ್ಟೆ ಹುಡುಕಿದರು ಮಗು ಸಿಕ್ಕಿರಲಿಲ್ಲ. ಕೊನೆಗೆ ಪೋಷಕರು ಸಂಪ್ ಓಪನ್ ಮಾಡಿದ್ದಾರೆ.

ಸಂಪ್ ಓಪನ್ ಮಾಡುತ್ತಿದ್ದಂತೆ ಮಗು ಸಾಯೀಶಾ ಸಂಪ್ ನಲ್ಲಿ ಬಿದ್ದಿರೋದು ಬೆಳಕಿಗೆ ಬಂದಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ಮಗು ಪೋಷಕರು ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಗು ಮೃತಪಟ್ಟಿದೆ ಎಂದು ವೈದ್ಯೆ ಸ್ಪಷ್ಟಪಡಿಸಿದ್ದಾರೆ. ಖಡೇ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ನೀರು ತುಂಬಿಸೋಕೆ ಮಾಡಿದ್ದ ಸಂಪ್ ಬಿದ್ದು ಮಗು ಸಾವನ್ನಪ್ಪಿದೆ.

- Advertisement -

Related news

error: Content is protected !!