

ಕನ್ಯಾನ: ವಾಹನ ಚಲಾವಣೆಯ ವೇಳೆ ದ್ವಿಚಕ್ರ ವಾಹನ ಸವಾರ ತಮ್ಮ ವಾಹನಕ್ಕೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಕಾರಿನಲ್ಲಿದ್ದ ಅನ್ಯಕೋಮಿನ ಯುವಕರ ತಂಡವೊಂದು ದ್ವಿಚಕ್ರ ಸವಾರನ ಮೇಲೆ ಹಲ್ಲೆ ನಡೆಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಜಂಕ್ಷನ್ ಬಳಿ ನಡೆದಿದೆ. ಹಲ್ಲೆಗೊಳಗಾದ ದ್ವಿಚಕ್ರ ಸವಾರನನ್ನು ಪ್ರಕಾಶ್ (47) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ಯಾನ ಮುಖ್ಯ ಪೇಟೆಯಲ್ಲಿ ಎಂಬಾತನು ತನ್ನ ಸಹ ಸವಾರನ ಜೊತೆ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರಿನಲ್ಲಿದ್ದ ಅನ್ಯಕೋಮಿನ ಯುವಕರ ತಂಡವೊಂದು ತಮ್ಮ ವಾಹನಕ್ಕೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ಕೂಟರ್ ಸವಾರನನ್ನು ಎಳೆದು ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುತ್ತಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಸ್ಕೂಟರ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 101/2024, ಕಲಂ:341,323,506 R/w 34 IPC ಮತ್ತು ಕಲಂ: 3(1)(r) ,3(2)(va) SC & ST Amendment Act 2015 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.