Thursday, June 4, 2026
spot_imgspot_img
spot_imgspot_img

ಹಿಮ್ಮುಖವಾಗಿ ಚಲಾಯಿಸಿದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ..!

- Advertisement -
- Advertisement -

ದಾಂಡೇಲಿ: ಕಾರೊಂದು ವೇಗವಾಗಿ ಹಿಮ್ಮುಖವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ದಾಂಡೇಲಿ ನಗರದ ಸಂಡೆ ಮಾರ್ಕೆಟ್ ಮುಂಭಾಗದಲ್ಲಿರುವ ಜೆ.ಎನ್ ರಸ್ತೆಯಲ್ಲಿ ನಡೆದಿದೆ.

ಗಂಭೀರ ಗಾಯಗೊಂಡವರನ್ನು ಪಟೇಲ್ ನಗರದ ನಿವಾಸಿಗಳಾದ ಎಲಿಜಬೆತ್ ಅಬ್ರಾಹಂ ಕಲ್ವಕುರಿ ಮತ್ತು ಅವರ ಮಗನಾದ ಯೇಸುದಾಸ್ ಅಬ್ರಾಹಂ ಕಲ್ವಕುರಿ ಎಂದು ಗುರುತಿಸಲಾಗಿದೆ.

ಕಾರೊಂದು ಸಂಡೆ ಮಾರ್ಕೆಟ್ ಮುಂಭಾಗದ ಜೆ.ಎನ್. ರಸ್ತೆಯಲ್ಲಿ ವೇಗವಾಗಿ ಹಿಮ್ಮುಖ ಚಲಿಸಿದ ಪರಿಣಾಮವಾಗಿ ಅದೇ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಗಾಯಗೊಂಡ ಇವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗದೆ. ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!