Tuesday, April 30, 2024
spot_imgspot_img
spot_imgspot_img

ಮುಚ್ಚುವ ಆತಂಕದಲ್ಲಿ ಖಾಸಗಿ ಶಾಲೆಗಳು

- Advertisement -G L Acharya panikkar
- Advertisement -

ಬೆಂಗಳೂರು(ಅ.23): ಕೊರೋನಾ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ 500ಕ್ಕೂ ಹೆಚ್ಚು ಮುಚ್ಚುವ ಆತಂಕದಲ್ಲಿವೆ.

ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಹಳೆ ಮೈಸೂರು ಭಾಗ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 500ಕ್ಕೂ ಹೆಚ್ಚು ಶಾಲೆಗಳು ಶಾಶ್ವತವಾಗಿ ಬಂದ್ ಆಗುವ ಆತಂಕ ಎದುರಿಸುತ್ತಿವೆ.ಕೋರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಸರ್ಕಾರ ಶಾಲೆಗಳನ್ನು ಆರಂಭಿಸಲು ಖಾಸಗಿಯವರಿಗೆ ಅನುಮತಿ ಕೊಟ್ಟಿಲ್ಲ. ಸದ್ಯ ಆನ್‍ಲೈನ್ ತರಗತಿಗೆ ಮಾತ್ರ ಅವಕಾಶ ನೀಡಲಾಗಿದೆ.

ಪ್ರಸಕ್ತ ವರ್ಷದ ಶುಲ್ಕ ಕಟ್ಟುವಂತೆ ಖಾಸಗಿ ಆಡಳಿತ ಮಂಡಳಿಯವರು ಪೋಷಕರಿಗೆ ಮಾರ್ಚ್ ತಿಂಗಳನಲ್ಲೇ ಸೂಚನೆ ಕೊಟ್ಟಿದ್ದರೂ ಶಾಲೆಗಳು ಆರಂಭವಾಗುವ ಬಗ್ಗೆ ಖಾತ್ರಿ ಇಲ್ಲದ ಕಾರಣ, ಈವರೆಗೂ ಪೋಷಕರು ಶುಲ್ಕ ಭರಿಸಿಲ್ಲ. ಹೀಗಾಗಿ ಆಡಳಿತ ಮಂಡಳಿಗೆ ಶಾಲೆ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ.

ಶಾಲೆಗಳೇ ಆರಂಭವಾಗುವುದು ಅನುಮಾನವಾಗಿರುವಾಗ ನಾವೇಕೆ ಶುಲ್ಕ ಕಟ್ಟಬೇಕೆಂದು ಪ್ರಶ್ನಿಸುತ್ತಾರೆ. ಹೀಗಾಗಿ ಸಿಬ್ಬಂದಿ ವೇತನ, ಶಾಲಾ ಕಟ್ಟಡಗಳ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಪ್ರತಿ ತಿಂಗಳು ಲಕ್ಷಾಂತರ ರೂ. ಖರ್ಚಾಗುತ್ತಿದೆ. ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲವಾದ ಕಾರಣ 500ಕ್ಕೂ ಹೆಚ್ಚು ಶಾಲೆಗಳು ಬೀಗ ಹಾಕುವ ಸ್ಥಿತಿಗೆ ಬಂದಿವೆ ಎಂದು ಖಾಸಗಿ ಶಾಲಾ ಒಕ್ಕೂಟದ ನೌಕರರೊಬ್ಬರು ತಿಳಿಸಿದ್ದಾರೆ. ನರ್ಸರಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲಿ ಸುಮಾರು 500 ವಿದ್ಯಾಲಯಗಳು ಬಂದ್ ಆಗುವ ಸಾಧ್ಯತೆ ಹೆಚ್ಚಿದ್ದು ಸಾವಿರಾರು ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

- Advertisement -

Related news

error: Content is protected !!