Thursday, June 11, 2026
spot_imgspot_img
spot_imgspot_img

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಲ್ಸಂಕ ತೋಡಿಗೆ ಬಿದ್ದ ಆಟೋ ರಿಕ್ಷಾ

- Advertisement -
- Advertisement -

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಉಡುಪಿ ನಗರದ ಕಲ್ಸಂಕ ತೋಡಿಗೆ ಬಿದ್ದ ಘಟನೆ ಭಾನುವಾರ ನಡೆದಿದೆ.

ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಿಂದ ಕಲ್ಸಂಕದ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾವು ತೋಡಿಗೆ ಬಿದ್ದಿದೆ. ಈ ಆಟೋವು ಮತ್ತೊಂದು ವಾಹನಕ್ಕೆ ಸೈಡ್ ನೀಡುವ ಭರದಲ್ಲಿ ಬಲಬದಿಗೆ ಬಂದಿದ್ದು, ತೋಡಿಗೆ ಆವರಣ ಗೋಡೆ ಇಲ್ಲದ ಪರಿಣಾಮ ತೋಡಿಗೆ ಬಿದ್ದಿದೆ ಎನ್ನಲಾಗಿದೆ.

ಘಟನೆಯಲ್ಲಿ ಯಾರಿಗೂ ಗಾಯ ಉಂಟಾಗಿಲ್ಲ. ತೋಡಿಗೆ ಬಿದ್ದ ಆಟೋ ರಿಕ್ಷಾವನ್ನು ಬಳಿಕ ಮೇಲಕ್ಕೆತ್ತಲಾಯಿತು. ಆಟೋವನ್ನು ಮೇಲಕ್ಕೆತ್ತಲು ಸ್ಥಳೀಯರು ಸಹಕಾರ ನೀಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!