Friday, June 5, 2026
spot_imgspot_img
spot_imgspot_img

ಚಾರ್ಮಾಡಿ ಫಾಲ್ಸ್ ಬಳಿ ಚೆಲ್ಲಾಟವಾಡುತ್ತಿದ್ದ ಯುವಕರ ಬಟ್ಟೆ ಹೊತ್ತೊಯ್ದ ಪೊಲೀಸ್

- Advertisement -
- Advertisement -

ಮೂಡಿಗೆರೆ: ನಿಷೇಧಿತ ಪ್ರೆದೇಶ ಎಂದು ಘೋಷಿಸಿದ್ದ ಜಲಪಾತದಲ್ಲಿ ಮೋಜು ಮಸ್ತಿಯಲ್ಲಿ ನಿರತರಾಗಿದ್ದ ಯುವಕರನ್ನು ಪೊಲೀಸರು ಚಡ್ಡಿಯಲ್ಲಿ ಓಡಿಸಿದ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಫಾಲ್ಸ್ ಬಳಿ ನಡೆದಿದೆ.

ಚಾರ್ಮಾಡಿ ಘಾಟಿಯಲ್ಲಿ ಫಾಲ್ಸ್‌ಗಳು ಮೈದುಂಬಿ ಹರಿಯುತ್ತಿದ್ದು, ಈ ಫಾಲ್ಸ್‌ನಲ್ಲಿ ಎಚ್ಚರಿಕೆ ಬೋರ್ಡ್ ಇದ್ರೂ ಕೂಡ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದಾರೆ. ನಿಷೇಧಿತ ಪ್ರದೇಶದಲ್ಲಿ ಬಂಡೆ ಹತ್ತಿ ಹುಚ್ಚಾಟ ತೋರುತ್ತಿದ್ದ ಪ್ರವಾಸಿಗರಿಗೆ ಬಿಸಿ ಮುಟ್ಟಿಸಿದ ಬಣಕಲ್ ಗಸ್ತು ಪೊಲೀಸರು ಯುವಕರ ಬಟ್ಟೆಗಳನ್ನು ತಂದು ಗಸ್ತು ವಾಹನಕ್ಕೆ ತುಂಬಿ ಶಾಕ್ ನೀಡಿದ್ದಾರೆ. ಪೊಲೀಸರ ಹಿಂದೆ ಚಡ್ಡಿಯಲ್ಲೇ ಓಡಿ ಬಂದ ಯುವಕರು ಪ್ಲೀಸ್ ಸರ್, ಇನ್ನೊಂದ್ ಸಲ ಹೀಗೆ ಮಾಡುವುದಿಲ್ಲ, ದಯವಿಟ್ಟು ಬಟ್ಟೆ ಕೊಡಿ ಎಂದು ಅಂಗಲಾಚಿದ್ದಾರೆ.

ಆ ಬಳಿಕ ಪ್ರವಾಸಿ ಯುವಕರು ಬಟ್ಟೆ ಕೊಡುವಂತೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಕೊನೆಗೆ ಪೊಲೀಸರು ಎಚ್ಚರಿಕೆ ಕೊಟ್ಬ ಬಳಿಕ ಬಟ್ಟೆಗಳನ್ನು ಕೊಟ್ಟು ಕಳುಹಿಸಿದ್ದಾರೆ.

- Advertisement -

Related news

error: Content is protected !!